ತುಳುಕೂಟದಿಂದ ತುಳು ಭಾವಗೀತೆ ಸ್ಪರ್ಧೆ

Update: 2023-11-16 16:08 GMT

ಉಡುಪಿ, ನ.16: ತುಳುಕೂಟ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ತುಳುಕವಿ ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಪರ್ಧೆ-2023ನ್ನು ನ.26ರ ರವಿವಾರ ಬೆಳಗ್ಗೆ 9:00ಗಂಟೆಗೆ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಜಗನ್ನಾತ ಸಭಾಭವನದಲ್ಲಿ ಆಯೋಜಿಸಿದೆ.

ಇದರಲ್ಲಿ 1ರಿಂದ 5ನೇ ತರಗತಿ ಬಾಲ ವಿಭಾಗ, 6ರಿಂದ 10ನೇ ತರಗತಿ ಕಿರಿಯ ವಿಭಾಗ, ಕಾಲೇಜು ವಿದ್ಯಾರ್ಥಿಗಳು ಹಿರಿಯ ವಿಭಾಗ ಹಾಗೂ 25 ವರ್ಷ ಮೇಲಿನವು ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಪ್ರತಿಯೊಬ್ಬ ಸ್ಪರ್ಧಿಗೂ ಮೂರು ನಿಮಿಷದ ತುಳು ಭಾವಗೀತೆ ಹಾಡಲು ಅವಕಾಶವಿದೆ. ತುಳು ಹಿರಿಯ, ಕಿರಿಯ ಸಾಹಿತಿಗಳ ರಚನೆ, ಸ್ವರಚಿತ, ತುಳು ಭಾವಗೀತೆಗಳಿಗೆ ಆದ್ಯತೆ ನೀಡಲಾಗುವುದು. ಸ್ಪರ್ಧಿಗಳು ನ.24ರೊಳಗೆ ತಮ್ಮ ಹೆಸರನ್ನು ಈ ಕೆಳಗಿನ ಮೊಬೈಲ್‌ಗಳಿಗೆ ಕರೆ ಮಾಡಿ ಅಥವಾ ಮಾಟ್ಸಪ್ ಮೂಲಕ ನೊಂದಾಯಿಸಿಕೊಳ್ಳಬಹುದು.

ಜಯರಾಮ್ ಮಣಿಪಾಲ: 9844328177, ವಿವೇಕಾನಂದ ಎನ್: 9449367595, ಪ್ರಭಾವತಿ: 8277653062.

ವಿಜೇತರಿಗೆ ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ 1000ರೂ ಮತ್ತು ಪ್ರಶಸ್ತಿ ಫಲಕ, ದ್ವಿತೀಯ ಬಹುಮಾನ 750ರೂ.+ಪ್ರಶಸ್ತಿ ಫಲಕ ಹಾಗೂ ತೃತೀಯ ಬಹುಮಾನ 500 ರೂ. +ಪ್ರಶಸ್ತಿ ಫಲಕ ನೀಡಲಾಗುತ್ತದೆ ಎಂದು ತುಳುಕೂಟ ಉಡುಪಿಯ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News