ಉಡುಪಿ : ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ಆನ್‌ಲೈನ್ ವಂಚನೆ
Update: 2024-01-02 15:37 GMT
ಉಡುಪಿ, ಜ.2: ಪಾರ್ಟ್ ಟೈಮ್‌ನಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಗಳು ವಾಟ್ಸಾಪ್, ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಪ್ರಶಾಂತ್ ಎಂಬವರನ್ನು ಸಂಪರ್ಕಿಸಿ, ಪಾರ್ಟ್ ಟೈಮ್‌ನಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಟಾಸ್ಕ್ ಪೂರ್ಣಗೊಳಿಸಲು ತಿಳಿಸಿದ್ದರು. ಬಳಿಕ ಟಾಸ್ಕ್‌ನಿಂದ ಬಂದ ಹಣವನ್ನು ಪಡೆಯಲು ಆರೋಪಿಗಳು ಸೂಚಿಸಿರುವ ವಿವಿಧ ಬ್ಯಾಂಕ್ ಖಾತೆಗಳಿಗೆ ಆ.22ರಿಂದ ಆ.30ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ಒಟ್ಟು 3,01,000ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಟಾಸ್ಕ್ ನಡೆಸಿ ಬಂದ ಹಣ ಹಾಗೂ ಪ್ರಶಾಂತ್‌ನಿಂದ ಪಡೆದ ಹಣವನ್ನು ಹಿಂದುರುಗಿಸದೆ ಮೋಸ ಮಾಡಿರುವುದಾಗಿ ದೂರಲಾಗಿದೆ.