ಅಹಿಂದ ಒಕ್ಕೂಟದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ರಿಗೆ ಬೆಂಬಲ ಘೋಷಣೆ

Update: 2024-04-30 16:29 GMT

ಡಾ.ಅಂಜಲಿ ನಿಂಬಾಳ್ಕರ್

ಕಾರವಾರ: ಲೋಕಸಭಾ ಚುನಾವಣೆಯಲ್ಲಿ ಅಹಿಂದ ಒಕ್ಕೂಟ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಬೆಂಬಲ ನೀಡಲಿದೆ ಎಂದು ಅಹಿಂದ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರಪ್ಪ‌ ಚನ್ನಯ್ಯ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ‌ ನಿಂಬಾಳ್ಕರ್ ಅವರನ್ನ ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಬದಲಾವಣೆ ತರಲು ಜಿಲ್ಲೆಯ ಮತದಾರರು ಮುಂದಾಗಬೇಕು. ಸಿದ್ದರಾಮಯ್ಯ ಸಿಎಂ ಆದ ನಂತರ ಕಳೆದ ಬಾರಿ ಕ್ಷೀರಭಾಗ್ಯ, ಅನ್ನ ಭಾಗ್ಯ ಸೇರಿದಂತೆ ಹಲವು ಯೋಜನೆ ತಂದಿದ್ದರು. ಈಗಲೂ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಈಡೇರಿಸಿದ್ದಾರೆ. ಅಹಿಂದ ವರ್ಗದ ಪರ ಸಿದ್ದರಾಮಯ್ಯನವರು ಇದ್ದಾರೆ ಎಂದರು.

ಸರ್ಕಾರದ ಯೋಜನೆಯಿಂದ ಹಳ್ಳಿಗಳ ಬಡವರಿಗೆ ಬಹಳ ಒಳ್ಳೆಯದಾಗಿದೆ. ಆರ್ಥಿಕ ಸ್ಥಿತಿ ಸುಧಾರಿಸಿದೆ. ರಾಜಕೀಯವಾಗಿ ಮೀಸಲಾತಿ ತಂದಿದ್ದರಿಂದ ಸಾಮಾನ್ಯ ಜನರಿಗೆ ಉಪಯೋಗ ಆಗಿದೆ. ತಾನು ಕೂಡ ಜಿಲ್ಲಾ‌ ಪಂಚಾಯತ್ ಸದಸ್ಯನಾಗಿದ್ದು ಇದೇ ಮೀಸಲಾತಿಯಿಂದ. ದೇಶದಲ್ಲಿ ಎಲ್ಲಾ‌ ಧರ್ಮದವರು ಒಂದು ಎಂದು ಬದುಕುತ್ತಿದ್ದಾರೆ.‌ ಆದರೆ ಇದನ್ನ‌ ಒಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಗೌರವಾಧ್ಯಕ್ಷ ಭಾಷಾ ಸಾಬ್ ಮಾತನಾಡಿ, ಪ್ರಧಾನಿ ಅವರು ಭಾಷಣದಲ್ಲಿ ಅಲ್ಪಸಂಖ್ಯಾತರನ್ನ ಗುರಿಯಾಗಿಟ್ಟುಕೊಂಡು ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಆಡಳಿತದಲ್ಲಿ ಬರಬೇಕಾಗಿದೆ. ಈ ಗೊಂದಲ ನಿವಾರಣೆ ಆಗಲಿದೆ ಎಂದರು.

ಪ್ರಮುಖರಾದ ಅಬ್ದುಲ್ ಖರೀಂ ಬಾಷಾ, ಡಾಕಪ್ಪ ಚನ್ನಯ್ಯ, ನಾಗೇಶ್ ಆರ್ ನಾಯ್ಕ, ಯಲ್ಲಪ್ಪ, ವಿನಾಯಕ ಚನ್ನಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News