ಭಟ್ಕಳ ತಾಲೂಕಾ ಕಸಾಪದಿಂದ ಶಿಕ್ಷಕರಿಗಾಗಿ ಕವನ ರಚನಾ ಸ್ಪರ್ಧೆ: ಬಹುಮಾನ ವಿತರಣೆ

Update: 2024-09-05 15:34 GMT

ಭಟ್ಕಳ: ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗಾಗಿ ಮಾನವನ ವಿಕೃತಿ ನಲುಗಿದ ಪ್ರಕೃತಿ ಎಂಬ ವಿಷಯದ ಕುರಿತು ಆಯೋಜಿಸಿದ ಕವನ ರಚನಾ ಸ್ಪರ್ಧೆಯ ವಿಜೇತರಿಗೆ ಸಾಹಿತ್ಯ ಇಲ್ಲಿನ ಕಮಲಾವತಿ ರಾಮನಾಥ ಶಾನಭಾಗ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ವಿತರಿಸಲಾಯಿತು.

ತಹಸೀಲ್ದಾರ ನಾಗರಾಜ ನಾಯ್ಕಡ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ, ಕ್ಷೇತ್ರ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ್ ಉಪನ್ಯಾಸಕ ರಾಜೇಂದ್ರ ನಾಯಕ, ಅರ್ಬನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಸಂತ ಶಾಸ್ತ್ರಿ, ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷೆ ಶಾರದಾ ನಾಯ್ಕ ಬಹುಮಾನ ವಿತರಿಸಿದರು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶ್ರೀಮತಿ ನಾಗರತ್ನ ಎಂ ನಾಯ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಕೂರು ಪ್ರಥಮ, ಸುಮಲತಾ ನಾಯ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಮಡಿ ಶ್ರೀಮತಿ ಜಯಶ್ರೀ ಡಿ ಆಚಾರಿ ಸಿ.ಆರ್.ಪಿ. ಬೆಳಕೆ ದ್ವಿತೀಯ ಹಾಗೂ ಮಹೇಶ ನಾಯ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ತೃತೀಯ ಬಹುಮಾನ ಪಡೆದುಕೊಂಡರು. ಪ್ರೌಢಶಾಲಾ ವಿಭಾಗದಲ್ಲಿ , ಸವಿತಾ ನಾಯ್ಕ, ಸರ್ಕಾರಿ ಪ್ರೌಢಶಾಲೆ, ಸೊನಾರಕೇರಿ ಪ್ರಥಮ, ಎನ್.ಜಿ.ಗೌಡ, ಸರ್ಕಾರಿ ಪ್ರೌಢಶಾಲೆ, ಬೆಳಕೆ, ಕುಮಾರ ನಾಯ್ಕ, ಸರ್ಕಾರಿ ಪ್ರೌಢಶಾಲೆ ದ್ವಿತೀಯ ಹಾಗೂ ಶಿವಕುಮಾರ ಹಿಚ್ಕಡ ತೃತೀಯ ಬಹುಮಾನ ಪಡೆದುಕೊಂಡರು.

ಆನಂದ ದೇವಾಡಿಗ ಗುರು ಸುಧೀಂದ್ರ ಕಾಲೇಜು ಪ್ರಥಮ, ಬೀನಾ ವೈದ್ಯ ಪ.ಪೂ.ಕಾಲೇಜಿನ ಹೇಮಾವತಿ ನಾಯ್ಕ ಹಾಗೂ ಮಂಜುನಾಥ ಗೌಡ ದ್ವಿತೀಯ ಹಾಗೂ ರಶ್ಮೀ ನಾಯ್ಕ, ಗುರು ಸುಧೀಂದ್ರ ಕಾಲೇಜು ಇವರು ತೃತೀಯ ಬಹುಮಾನ ಪಡೆದುಕೊಂಡರು. ಸ್ಪರ್ದೆಯಲ್ಲಿ ವಿಜೇತರಾದ ಹಾಗೂ ಭಾಗವಹಿಸಿದವರಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಆಭಿನಂದಿಸಿದ್ದಾರಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸಿದ ಕವಿ ಶಿಕ್ಷಕರುಗಳಿಗೆ ಸಾಹಿತ್ಯ ಸಮ್ಮೇಳನ ಮತ್ತಿತರ ಸಂದರ್ಭಗಳಲ್ಲಿ ಆಯೋಜಿಸುವ ಕವಿಗೋಷ್ಠಿಯಲ್ಲಿ ವೇದಿಕೆ ಕಲ್ಪಿಸಿ ಕವನ ವಾಚನಕ್ಕೆ ಅವಕಾಶ ನೀಡಲಾಗು ವುದು ಅಲ್ಲದೇ ಬರೆವಣಿಗೆಯಲ್ಲಿ ಆಸಕ್ತಿಯಿರುವವರಿಗಾಗಿ ಕಾವ್ಯಕಮ್ಮಟವನ್ನೂ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭ ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪೂರ್ಣಿಮಾ ಕರ್ಕಿಕರ್ ಹಾಗೂ ಪರಮೇಶ್ವರ ನಾಯ್ಕ, ಸುರೇಶ ಮುರ್ಡೇಶ್ವರ, ಶಿಕ್ಷಣ ಸಂಯೋಜಕ ಅಶೋಕ ಆಚಾರಿ, ಗೀತಾ ನಾಯ್ಕ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News