ಪ್ರಕೃತಿಯೊಂದಿಗೆ ಮೈತ್ರಿ: ನಿಮ್ಮ ಜಾಗ, ನಮ್ಮ ಗಿಡ

ಪರಿಸರವನ್ನು ಉಳಿಸಿ ಬೆಳೆಸಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವನ್ನು ಹವ್ವಾ ಹಸನ್ ಫೌಂಡೇಶನ್‌ನ ವತಿಯಿಂದ ಕೈಗೊಳ್ಳಲಾ ಗಿದೆ. ಹಣ್ಣಿನ ಗಿಡಗಳನ್ನು ನೆಡುವುದರಿಂದ ನಮಗೆ ಮಾತ್ರವಲ್ಲ, ಅದರ ಫಲ ಪ್ರಾಣಿ ಪಕ್ಷಿಗಳಿಗೂ ಸಿಗುತ್ತವೆೆ. ಈ ಉದ್ದೇಶಕ್ಕಾಗಿ ಹಲಸಿನ ಸಸಿಗಳನ್ನು ನೆಡಲು ಆದ್ಯತೆ ನೀಡಿರುವೆನು. ಪರಿಸರ ಸಂಕ್ಷರಣೆಯ ನಮ್ಮ ಯೋಜನೆಗೆ ಸ್ಥಳೀಯರಿಂದ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ. <ಸಿಎ ಅಬ್ದುಲ್ಲ ಮಾದುಮೂಲೆ, ಸೀನಿಯರ್ ಫೈನಾನ್ಸಿಯಲ್ ್ಸ ಕಂಟ್ರೋಲರ್ ಝಾಯೆದ್ ಫೌಂಡೇಶನ್, ಅಬುಧಾಬಿ

Update: 2023-10-09 09:42 GMT

ಮಂಗಳೂರು, ಅ.8: ಕೇರಳ-ಕರ್ನಾಟಕ ಗಡಿಭಾಗದ ಪ್ರದೇಶಗಳಲ್ಲಿ ಉತ್ತಮ ತಳಿಯ ಹಲಸಿನ ಸಸಿಗಳನ್ನು ಆಸಕ್ತರ ಮನೆ ಬಾಗಿಲಿಗೆ ಕೊಂಡೊಯ್ದು ಅವರು ಸೂಚಿಸುವ ಜಾಗದಲ್ಲಿ ನೆಡಲು ವ್ಯವಸ್ಥೆ ಮಾಡುವ ಮೂಲಕ ಯುಎಇ ಯಲ್ಲಿ ಉದ್ಯೋಗದಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಗಮನಸೆಳೆಯುತ್ತಿದ್ದಾರೆ.

ಯುಎಇನಲ್ಲಿ ಉದ್ಯೋಗದಲ್ಲಿರುವ ಸಿಎ ಅಬ್ದುಲ್ಲ ಮಾದುಮೂಲೆ ಈ ಪರಿಸರ ಪ್ರೇಮಿ. ಇವರು ‘ಪ್ರಕೃತಿಯೊಂದಿಗೆ ಮೈತ್ರಿ’ ಎಂಬ ಘೋಷವಾಕ್ಯದೊಂದಿಗೆ ತನ್ನ ಹುಟ್ಟೂರಿನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಲಸಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂಕ್ಷರಣೆಯ ಕಡೆಗೆ ಗಮನಹರಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕ, ಸಾರಡ್ಕ, ಪುಣಚ ಗ್ರಾಮದ ಮೂಡಂಬೈಲು, ಎಣ್ಮಕಜೆ ಗ್ರಾಮದ ಚವರ್‌ಕಾಡ್, ಅಡ್ಕಸ್ಥಳ , ಕುದ್ಕೋಳಿ, ನಲ್ಕ, ಮರ್ತ್ಯ, ಪೆರ್ಲ ಬಜಕೂಡ್ಲು, ಕನ್ನಡಿಕಾನ, ಖಂಡಿಗ, ವಾಣಿನಗರ, ಮತ್ತಿತರ ಪ್ರದೇಶಗಳ ಹಲವೆಡೆ ಈ ರೀತಿ ಈಗಾಗಲೇ ಹಲಸಿನ ಸಸಿಗಳನ್ನು ನೆಟ್ಟಿದ್ದಾರೆ.

ತಮ್ಮ ಹೆತ್ತವರ ಹೆಸರಿನಲ್ಲಿ ಸ್ಥಾಪಿಸಲಾದ ಟ್ರಸ್ಟ್ ಹವ್ವಾ-ಹಸನ್ ಫೌಂಡೇಶನ್ ಮೂಲಕ ಹುಟ್ಟೂರಿನಲ್ಲಿ ಹಲವು ಸಾಮಾಜಿಕ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ , ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಹಾಯ ನೀಡುತ್ತಾ ತಮ್ಮನ್ನು ತೊಡಗಿಸಿಕೊಂಡಿರುವ ಸಿಎ ಅಬ್ದುಲ್ಲ ಮಾದುಮೂಲೆ ಪರಿಸರ ಸಂರಕ್ಷಣೆಯ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ.

ಕಳೆದ ಕೊರೋನ ಸಂಕಷ್ಟದ ಸಮಯದಲ್ಲಿ ತೊಂದರೆಗೊಳಗಾದ ಪರಿಸರದ ಜನರಿಗೆ ಫುಡ್ ಕಿಟ್ ವ್ಯವಸ್ಥೆ, ಆರ್ಥಿಕ ನೆರವು ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದರು.

ಹವ್ವಾ ಹಸನ್ ಫೌಂಡೇಶನ್‌ನ ಪರಿಸರ ಸಂರಕ್ಷಣೆ ಯೋಜನೆ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಅಲ್ಲಲ್ಲಿ ಪ್ಲೆಕ್ಸ್‌ಗಳನ್ನು ಹಾಕಲಾ

ಗಿತ್ತು. ಆ ಮೂಲಕ ಹಲಸಿನ ಸಸಿಗಳನ್ನು ತಮ್ಮ ಜಾಗದಲ್ಲಿ ನೆಡಲು ಆಸಕ್ತಿ ಹೊಂದಿರುವವರು ದೂರವಾಣಿ ಮೂಲಕ ಸಂಪರ್ಕಿಸಿ ವಿವರ ನೀಡುವಂತೆ ಮನವಿ ಮಾಡಲಾಗಿತ್ತು.

ಆಸಕ್ತರ ಮನೆ ಬಾಗಿಲಿಗೆ ಗಿಡಗಳನ್ನು ಕೊಂಡೊಯ್ದು ಅವರು ತೋರಿಸಿದ ಜಾಗದಲ್ಲಿ ಹೊಂಡ ತೆಗೆದು ಗಿಡಗಳನ್ನು ನೆಡುತ್ತಿದ್ದಾರೆ.

ಆಂಧ್ರ ಮೂಲದ ಉತ್ತಮ ಹಲಸಿನ ಹಣ್ಣಿನ ತಳಿಯ ಸಸಿಗಳ ಜೊತೆಗೆ ಊರಿನ ಹಲಸಿನ ತಳಿಯ ಗಿಡಗಳನ್ನು ನೆಡಲಾಗುತ್ತಿದೆ. ಆಂಧ್ರ ಮೂಲದ ಹಲಸಿನ ತಳಿಯ ಸಸಿಗೆ ಮಾರ್ಕೆಟ್‌ನಲ್ಲಿ 250 ರೂ. ಬೆಲೆಯಿದೆ.

ಒಂದು ಸಾವಿರ ಹಲಸಿನ ಗಿಡಗಳನ್ನು ನೆಡುವ ಅಬ್ದುಲ್ಲರ ಈ ಯೋಜನೆಗೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಬ್ದುಲ್ಲರ ಸಂಸ್ಥೆಯ ನೌಕರರು ಕಳೆದ ಐದು ದಿನಗಳಿಂದ ಸಸಿಗಳನ್ನು ನೆಡುವ ಕಾಯಕವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ತನ್ನ ಊರಿನಲ್ಲಿರುವ ಅಬ್ದುಲ್ಲ ಮಾದುಮೂಲೆ ತನ್ನ ಕೆಲಸದಾಳುಗಳ ಜೊತೆ ಹಾರೆ, ಪಿಕ್ಕಾಸು ಹಿಡಿದು ಹೊಂಡ ತೆಗೆದು ಸಸಿ ನೆಟ್ಟಿದ್ದಾರೆ. ಅವರ ಟ್ರಸ್ಟ್‌ನ ಎಲ್ಲ ಯೋಜನೆಗಳಿಗೆ ಸಹೋದರ ಸಿದ್ದೀಕ್ ಮಾದುಮೂಲೆ ಸಾಥ್ ನೀಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಇಬ್ರಾಹೀಂ ಅಡ್ಕಸ್ಥಳ

contributor

Similar News