ಯಾದಗಿರಿ | ಸಿರಿಧಾನ್ಯ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ : ಜಿ.ಪಂ.ಸಿಇಓ ಲವೀಶ ಒರಡಿಯಾ
ಯಾದಗಿರಿ : ಸಿರಿಧಾನ್ಯ ಸೇವನೆಯಿಂದ ಗುಣವಾಗದ ಕಾಯಿಲೆಗಳನ್ನೂ ಗುಣ ಪಡಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಲವೀಶ್ ಒರಡಿಯಾ ಅವರು ಹೇಳಿದರು.
ಕೃಷಿ ಇಲಾಖೆಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಿರಿಧಾನ್ಯ ಹಾಗೂ ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಸ್ಪರ್ಧೆ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಸಿರಿಧಾನ್ಯ ಸೇವನೆಯಿಂದ ಗುಣವಾಗದ ಕಾಯಿಲೆಗಳು ಗುಣಪಡಿಸಬಹುದು. ಪೌಷ್ಟಿಕ ಆಹಾರ ಹೊಂದಿರುವ ಸಿರಿಧಾನ್ಯಗಳನ್ನು ಎಲ್ಲರೂ ದಿನನಿತ್ಯ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ತಾಲೂಕಿನ ಸ್ಪರ್ಧಾಳುಗಳು ಭಾಗಿಯಾಗಿದ್ದರು. ಒಟ್ಟು 22 ಜನ ಭಾಗವಹಿಸಿ ಸಿರಿ ಧಾನ್ಯಗಳಿಂದ ಮಾಡಿದಂತಹ ಪದಾರ್ಥ ಪ್ರದರ್ಶಿಸಿದರು. ಸಿರಿಧಾನ್ಯ ಹಾಗೂ ಸಾವಯವ ಅಂತರಾಷ್ಟ್ರೀಯ ಮೇಳ 2025ರ ಈ ಸ್ಪರ್ಧೆಯಲ್ಲಿ 9 ಜನ ಸ್ಪರ್ಧಾಳುಗಳನ್ನು ವಿಜೇತರನ್ನಾಗಿ ಘೋಷಿಸಲಾಯಿತು.
ಸಿರಿಧಾನ್ಯ ಸ್ಪರ್ಧೆಗೆ ತೀರ್ಪುಗಾರರಾಗಿ ಆಗಮಿಸಿದ ಡಾ.ಶಶಿಕಲಾ ರೂಳಿ, ಡಾ.ವಾಣಿಶ್ರೀ ಹಾಗೂ ಮನುಜಾಕ್ಷಿ ಬಂದಂತ ಎಲ್ಲ ಸ್ಪರ್ಧೆಗಳ ಸಿರಿಧಾನ್ಯಗಳಿಂದ ಮಾಡಿದ ಪದಾರ್ಥ ವೀಕ್ಷಣೆ ಮಾಡಿ ತೀರ್ಪು ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರು ರವೀಂದ್ರನಾಥ್ ಸೂಗೂರು, ಉಪ ಕೃಷಿ ನಿರ್ದೇಶಕರು ಮಂಜುಳಾ ಬಸವ ರೆಡ್ಡಿ, ಸಹಾಯಕ ಕೃಷಿ ನಿರ್ದೇಶಕರು ರಾಜಕುಮಾರ್,ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.