ಯಾದಗಿರಿ | ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ್ ಭೇಟಿ

Update: 2024-11-15 14:15 GMT

ಯಾದಗಿರಿ : ಸುರಪುರ ತಾಲೂಕಿನ ಗುಡಿಹಾಳ(ಜೆ) ಗ್ರಾಮದ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ್ ಅವರು ಭೇಟಿ ನೀಡಿದ್ದಾರೆ.

ಶಾಲೆಗೆ ಭೇಟಿ ನೀಡಿದ ಅವರು ಕಲಿಕೆಯ ಗುಣಮಟ್ಟ ಹಾಗೂ ವಸತಿ ಶಾಲೆಯಲ್ಲಿನ ಮೂಲಸೌಕರ್ಯಗಳ ಕುರಿತು ಮಕ್ಕಳೊಂದಿಗೆ ಚರ್ಚಿಸಿದರು.

ಶಾಲೆಯಲ್ಲಿ ಶಿಕ್ಷಕರು ಪ್ರತಿನಿತ್ಯ ಸರಿಯಾಗಿ ಪಾಠ ಮಾಡುತ್ತಾರೆಯೇ ಎಂದು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳ ನೋಟ್‌ಬುಕ್‌ಗಳನ್ನು ಸ್ವತ: ಚೆಕ್ ಮಾಡಿ ನೋಡಿದರು. ಅಲ್ಲದೇ ವಸತಿ ಶಾಲೆಯಲ್ಲಿ ಸರಿಯಾಗಿ ಊಟ ಕೊಡಲಾಗುತ್ತಿದೆಯೇ ಹಾಗೂ ಶಿಕ್ಷಕರು ಹಾಗೂ ಸಿಬ್ಬಂದಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳನ್ನು ಕೇಳಿ ತಿಳಿದುಕೊಂಡರು. ಸರಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು ನೀವು ಕೂಡಾ ಕಷ್ಟಪಟ್ಟು ಚೆನ್ನಾಗಿ ಓದಿ ವಿದ್ಯಾವಂತರಾಗಬೇಕು. ಉನ್ನತ ಹುದ್ದೆಗಳಿಸುವ ಗುರಿ ನಿಮ್ಮದಾಗಿರಲಿ. ನೀವು ಕಲಿಯುತ್ತಿರುವ ಶಾಲೆ ಹಾಗೂ ತಂದೆ-ತಾಯಿ ಹಾಗೂ ಕುಟುಂಬಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ವಿಠಲ್ ಯಾದವ್, ತಹಶೀಲ್ದಾರ ಎಚ್.ಎ.ಸರಕಾವಸ್, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಗ್ರಾಮ ಲೆಕ್ಕಿಗರಾದ ಸುಮಾ ಪಾಟೀಲ, ಹಣಮಂತ್ರಾಯ ಮಕಾಶಿ, ಶಿವರಾಜ ನಾಯಕ ಹಾಗೂ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News