ಯಾದಗಿರಿ | ಯುವ ಪೀಳಿಗೆ ಮಾದಕ ವ್ಯಸನದಿಂದ ಮುಕ್ತರಾಗಬೇಕು : ಶರಣಪ್ಪ ಪಾಟೀಲ್
Update: 2024-12-17 15:34 GMT
ಯಾದಗಿರಿ : ಯುವ ಪೀಳಿಗೆ ಮಾದಕ ವ್ಯಸನದಿಂದ ಮುಕ್ತರಾಗಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್ ಅವರು ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಡಿ.17ರಂದು ಖಾನಾಪುರ ಗ್ರಾಮದ ಸರಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ʼನಶ ಮುಕ್ತ ಭಾರತ ಅಭಿಯಾನʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕರಾದ ಸಿ.ಎಂ.ಪಟ್ಟೇದಾರ, ಸರಕಾರಿ ಪ್ರೌಢ ಶಾಲೆ ಖಾನಾಪುರ ಮುಖ್ಯ ಗುರುಗಳಾದ ರವೀಂದ್ರ, ಸಹ ಶಿಕ್ಷಕರು, ಬಾಲಾಜಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀದೇವಿ, ವಿಜಯಲಕ್ಷ್ಮಿ, ಯಂಕಣ್ಣ ಉಪಸ್ಥಿತರಿದ್ದರು.