ಮಾ.27: ವಿವಿಧೆಡೆ ವಿದ್ಯುತ್ ನಿಲುಗಡೆ

ಮಂಗಳೂರು: ಬಿಜೈ ಉಪಕೇಂದ್ರದಿಂದ ಹೊರಡುವ ಭಾರತೀನಗರ, ವಿವೇಕನಗರ, ಬಿಜೈ, ಕಾಪಿಕಾಡ್, ಹ್ಯಾಟ್‌ಹಿಲ್, ಆನೆಗುಂಡಿ,ಉರ್ವಸ್ಟೋರ್, ಪ್ರೆಸ್ಟೀಜ್ ವ್ಯಾಲಿ, ದಡ್ಡಲ್‌ಕಾಡ್ ಫೀಡರ್‌ಗಳಲ್ಲಿ ಹಾಗೂ ನೆಹರೂ ಮೈದಾನ ಉಪಕೇಂದ್ರ, ಕದ್ರಿ ಉಪ ಕೇಂದ್ರ ಮತ್ತು ಕುದ್ರೋಳಿ ಉಪಕೇಂದ್ರ ಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಮಾ.27 ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾವೂರು-ಬಿಜೈ ಯುಜಿ ಕೇಬಲ್ ಬೇ ಲೈನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೆಪಿಟಿಸಿಎಲ್, ಕಾವೂರು ವತಿಯಿಂದ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಈ ಫೀಡರ್‌ಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
*ಕಂಕನಾಡಿ ಉಪಕೇಂದ್ರದಿಂದ ಹೊರಡುವ ಅತ್ತಾವರ ಮತ್ತು ಫಳ್ನೀರ್ ಫೀಡರ್‌ಗಳಲ್ಲಿ ಮಾ.27ರಂದು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ತುರ್ತು ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಕಂಕನಾಡಿ, ವೆಲೆನ್ಸಿಯಾ, ಸೈಂಟ್ ಜೋಸೆಫ್ ನಗರ, ಬಿ.ಪಿ ರಸ್ತೆ, ಗೋರಿಗುಡ್ಡ, ಉಜ್ಜೋಡಿ, ಹೈಲ್ಯಾಂಡ್, ಯುನಿಟಿ ಹಾಸ್ಪಿಟಲ್, ಸೈಂಟ್ ಮೆರೀಸ್ ಸ್ಕೂಲ್, ವಾಸ್‌ಲೇನ್, ಬಲ್ಮಠ ಮಿಷನ್ ಕಾಂಪೌಂಡು, ಬಲ್ಮಠ ನ್ಯೂರೋಡ್, ಅಥೆನಾ ಹಾಸ್ಪಿಟಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
*ಕುಲಶೇಖರ ಉಪಕೇಂದ್ರದಿಂದ ಹೊರಡುವ ಪಂಪ್‌ವೆಲ್ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಮಾ.27ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊ ಳ್ಳಲಾಗಿದೆ. ಹಾಗಾಗಿ ಉಜ್ಜೋಡಿ, ಮಾರುತಿ ಗ್ಯಾರೇಜ್, ಚೆನ್ನ ಭವನಾ, ದೂಮಪ್ಪರೆಸಿಡೆನ್ಸಿ, ಗಂಗಾ ಬಡಾವಣೆ, ಸೆಂಟ್ರಲ್ ಎಕ್ಸಾಯ್ಸ್, ಕಮಲಮ್ಮ ಬಡಾವಣೆ, ಕಾಂತನ ಬೆಟ್ಟು, ಕಾಂತಪ್ಪಬಡಾವಣೆ, ಮಹಾಲಿಂಗೇಶ್ವರ ಟೆಂಪಲ್, ಮೀನಾಕ್ಷಿ ಅಪಾರ್ಟ್‌ಮೆಂಟ್, ಕೃಷ್ಣಕುಟೀರ, ಪಾಲೆಮಾರ್ ಲೇಔಟ್, ನೇತ್ರಾವತಿ ಲೇಔಟ್, ನಿಟ್ಟೆ ಎಜುಕೇಶನ್, ರೆಡ್ ಬಿಲ್ಡಿಂಗ್, ಸೈಮನ್ ಲೇನ್, ಸಿ.ಪಿ ಆಲಿ ಕಾಂಪ್ಲೆಕ್ಸ್, ಕಪಿತಾನಿಯೊ, ಮೀರಾ ಪ್ರಿಂಟರ್ಸ್, ಪಂಪ್‌ವೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.