ಪುಸ್ತಕಗಳಿಂದ ಕನಸು ನನಸು: ರಘು ಇಡ್ಕಿದು

Update: 2023-08-21 14:19 GMT

ಮಂಗಳೂರು, ಆ.21: ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯುವುದು ತುಂಬಾ ಕಷ್ಟ. ಆದರೆ ಪುಸ್ತಕಗಳಿಂದ ಈ ಕನಸನ್ನು ನನಸು ಮಾಡಲು ಸಾಧ್ಯವಿದೆ. ಹಾಗಾಗಿ ಗ್ರಂಥಪಾಲಕರನ್ನು ಗೌರವಿಸುವುದು ಓದುಗರ ಕರ್ತವ್ಯವಾಗಿದೆ ಎಂದು ಲೇಖಕ, ಉಪನ್ಯಾಸಕ ರಘು ಇಡ್ಕಿಡು ಹೇಳಿದರು.

ನಗರದ ಡಾ.ಪಿ.ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ದಕ್ಷಿಣ ಕನ್ನಡ- ಉಡುಪಿ-ಕೊಡಗು ಜಿಲ್ಲಾ ಗ್ರಂಥಾಲಯಗಳ ಸಂಘವು ಜಂಟಿಯಾಗಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ರಾಷ್ಟೀಯ ಗ್ರಂಥಪಾಲಕರ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ವಿಭಾಗ ಮತ್ತು ಮಾಹಿತಿ ವಿಜ್ಞಾನದ ಅಧ್ಯಕ್ಷ ಡಾ. ಉಮೇಶ್ ನಾಯಕ್ ಗ್ರಂಥಾಲಯ ವೃತ್ತಿಪರರಿಗಾಗಿ ತೆರೆದ ಸಾಫ್ಟ್‌ವೇರ್ ಪರಿಕರಗಳ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭ 2022-23ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಗ್ರಂಥಪಾಲಕಿ ಸುನಿತಾ, ಕಾಸರಗೋಡು ಕೇಂದ್ರೀಯ ವಿದ್ಯಾಲಯದ ಗ್ರಂಥಪಾಲಕ ಶಂಕರ್ ನಾರಾಯಣ ಭಟ್, ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.

ಹಾವೇರಿಯ ಜಾನಪದ ವಿಶ್ವವಿದ್ಯಾನಿಲಯದ ಮುಖ್ಯ ಗ್ರಂಥಪಾಲಕರಾಗಿ ನಿಯುಕ್ತಿಗೊಂಡ ಡಾ.ರಾಜೇಶ್ ಕುಂಬಾರ್ ಹಾಗೂ 2021-22ನೇ ಸಾಲಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ರೇಣುಕಾರನ್ನು ಸನ್ಮಾನಿಸಲಾಯಿತು.

ಸಂಘದ ನ್ಯೂಸ್ ಬುಲೆಟಿನನ್ನು ಬಿಡುಗಡೆಗೊಳಿಸಿಲಾಯಿತು. ಕೋಶಾಧಿಕಾರಿ ಕವಿತಾ ಲೆಕ್ಕ ಪತ್ರ ಮಂಡಿಸಿದರು. ಸಂಘದ ಕಾರ್ಯದರ್ಶಿ ರಾಮ ಕೆ., ಸಂಘದ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ವನಜಾ, ಕಾರ್ಯಕ್ರಮದ ಸಂಯೋಜಕಿ ಉಮಾ ಎ.ಬಿ., ಜತೆ ಕಾರ್ಯದರ್ಶಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಡಾ. ವಾಸಪ್ಪಗೌಡ ಪ್ರಾಸ್ತವಿಕವಾಗಿ ಮಾತನಾಡಿದರು. ಡಾ.ಎಸ್.ಆರ್.ರಂಗನಾಥನ್ ಸ್ವಾಗತಿಸಿದರು. ಡಾ. ರವಿಚಂದ್ರ ನಾಯ್ಕ ವಂದಿಸಿದರು. ಸಂಘದ ಉಪಾಧ್ಯಕ್ಷೆ ಡಾ. ರೇಖಾ ಡಿ. ಪೈ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News