ಕರ್ನಾಟಕ ಮುಸ್ಲಿಂ ಜಮಾತ್, ‌SYS, SSF ಮಂಗಳೂರು ಝೋನ್ ಸಮಿತಿಯಿಂದ ಮಾದಕ ವಸ್ತು ಜಾಲ ಬೇಧಿಸಿದ ಮಂಗಳೂರಿನ ಸಮರ್ಥ ಸಿಸಿಬಿ ಪೊಲೀಸರಿಗೆ ಸನ್ಮಾನ

Update: 2025-03-20 09:55 IST
ಕರ್ನಾಟಕ ಮುಸ್ಲಿಂ ಜಮಾತ್, ‌SYS, SSF  ಮಂಗಳೂರು ಝೋನ್ ಸಮಿತಿಯಿಂದ ಮಾದಕ ವಸ್ತು ಜಾಲ ಬೇಧಿಸಿದ ಮಂಗಳೂರಿನ ಸಮರ್ಥ ಸಿಸಿಬಿ ಪೊಲೀಸರಿಗೆ ಸನ್ಮಾನ
  • whatsapp icon

ಮಂಗಳೂರು: 75 ಕೋಟಿ ಮೌಲ್ಯದ ಮಾದಕ ವಸ್ತು ಜಾಲ ಬೇಧಿಸಿದ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಮಂಗಳೂರು ಝೋನ್ ಸಮಿತಿ ಯಿಂದ ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್ ಹಾಗೂ ರವಿಶಂಕರ್, ಎಸಿಪಿ ಮನೋಜ್ ಕುಮಾರ್, ಇನ್ಸ್ಪೆಕ್ಟರ್ ರಫೀಕ್ ಹಾಗೂ ಸಬ್ ಇನ್ಸ್ ಪೆಕ್ಟರ್ ಗಳಾದ ರಾಜೇಂದ್ರ,ಶರಣಪ್ಪ ಹಾಗೂ ಮೂವತ್ತರಷ್ಟು ಸಿಬ್ಬಂದಿಗಳಿಗೆವಿಶೇಷ ಗೌರವ ನೀಡಿ ಸನ್ಮಾನ ಮಾಡಲಾಯಿತು.

ನಿಯೋಗದಲ್ಲಿ ಮುಸ್ಲಿಂ ಜಮಾಅತ್ ನಾಯಕರಾದ ಬಿಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ವಿ ಎ ಮುಹಮ್ಮದ್ ಸಖಾಫಿ, ಅಬ್ದುಲ್ ಸಲೀಂ ಅಡ್ಯಾರ್ ಪದವು, ಅಬ್ದುಲ್ ಹಮೀದ್, ಎಸ್ ಎಸ್ ಎಫ್ ರಾಜ್ಯ ನಾಯಕರಾದ ಅಲಿ ತುರ್ಕಳಿಕೆ, ಇರ್ಷಾದ್ ಹಾಜಿ ಗೂಡಿನಬಳಿ, ಎಸ್ ವೈ ಎಸ್ ನಾಯಕರಾದ ಸತ್ತಾರ್ ಸಖಾಫಿ, ನಝೀರ್ ಲುಲು, ಹಸನ್ ಪಾಂಡೇಶ್ವರ, ಕೆ ಸಿ ಸುಲೈಮಾನ್ ಮುಸ್ಲಿಯಾರ್, ಜಬ್ಬಾರ್ ಕಣ್ಣೂರು, ಸಿದ್ದೀಕ್ ಟೈಲರ್, ರಷೀದ್ IBMಉಪಸ್ಥಿತರಿದ್ದರು.

ಮುಸ್ಲಿಂ ಜಮಾತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿ ನವಾಜ್ ಸಖಾಫಿ ಅಡ್ಯಾರ್ ಪದವು ಧನ್ಯವಾದ ಮಾಡಿದರು.

ದಿನದಿಂದ ದಿನಕ್ಕೆ ಬಹಳ ಆತಂಕಕಾರಿ ಬೆಳವಣಿಗೆ ಸೃಷ್ಟಿಸುತ್ತಿರುವ ಡ್ರಗ್ಸ್ ಜಾಲ ಹಲವಾರು ಕುಟುಂಬವನ್ನು ಚಿಂತೆಗೀಡು ಮಾಡಿದೆ. ವಿದ್ಯಾರ್ಥಿಗಳ ಯುವಕರ ಬೆಳವಣಿಗೆಯಲ್ಲಿ ಮಾರಕವಾಗಿ ಡ್ರಗ್ಸ್ ಪರಿಣಮಿಸುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಮಂಗಳೂರಿನ ಸಿಸಿಬಿ ಪೊಲೀಸರು ಭೇದಿಸಿರುವು ಶ್ಲಾಘನೀಯ.

- ಕರ್ನಾಟಕ ಮುಸ್ಲಿಂ ಜಮಾಅತ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News