ವಾರ್ತಾ ಇಲಾಖೆಗೆ ಸಿಎಂ ಮಾಧ್ಯಮ ಸಲಹೆಗಾರರ ಭೇಟಿ
Update: 2025-03-25 20:25 IST

ಮಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ಪ್ರಭಾಕರ್ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಗೆ ಮಂಗಳವಾರ ಭೇಟಿ ನೀಡಿದರು.
ಬಳಿಕ ಕಚೇರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಇಲಾಖಾ ಪ್ರಗತಿ ಮಾಹಿತಿ ಪಡೆದರು. ಗ್ರಾಮಾಂತರ ಪತ್ರಕರ್ತರ ಬಸ್ ಪಾಸ್ ಹಾಗೂ ಪತ್ರಕರ್ತರ ಪಿಂಚಣಿ ಯೋಜನೆ ಕುರಿತು ಚರ್ಚಿಸಿದರು.
ಕಚೇರಿಯಲ್ಲಿ ಸಿಬ್ಬಂದಿಯ ಕೊರತೆ ಹಾಗೂ ಪತ್ರಕರ್ತರ ಪ್ರವಾಸಕ್ಕೆ ಹೊಸ ಬಸ್ ಒದಗಿಸುವ ಬಗ್ಗೆ ಶೀಘ್ರ ದಲ್ಲಿ ಸರಕಾರ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು. ಶೀಘ್ರ ನಿವೃತ್ತಿ ಹೊಂದಲಿರುವ ವಾರ್ತಾ ಇಲಾಖೆಯ ಸಿಬ್ಬಂದಿ ವಿಶ್ವನಾಥ ಜೋಗಿ ಅವರನ್ನು ಈ ವೇಳೆ ಸನ್ಮಾನಿಸಿದರು.
ಈ ಸಂದರ್ಭ ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.