ತ್ರಿಪುರಾ | 11 ಬಾಂಗ್ಲಾದೇಶಿಗಳ ಬಂಧನ

Update: 2024-06-30 16:56 GMT

Photo Credit: PTI

ಅಗರ್ತಲಾ: ಯಾವುದೇ ಮಾನ್ಯ ಪ್ರಯಾಣ ದಾಖಲೆಗಳಿಲ್ಲದೆ ದೇಶವನ್ನು ಪ್ರವೇಶಿಸಿದ್ದಕ್ಕಾಗಿ 11 ಬಾಂಗ್ಲಾದೇಶಿ ಪ್ರಜೆಗಳನ್ನು ಅಗರ್ತಲಾ ರೈಲು ನಿಲ್ದಾಣದಿಂದ ಬಂಧಿಸಲಾಗಿದೆ ಎಂದು ಪೋಲಿಸರು ರವಿವಾರ ತಿಳಿಸಿದರು.

ಕೆಲವು ಬಾಂಗ್ಲಾದೇಶಿ ಪ್ರಜೆಗಳು ತ್ರಿಪುರಾದ ಸಿಪಾಹಿಜಲಾ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದು, ಅಗರ್ತಲಾ ರೈಲು ನಿಲ್ದಾಣದಲ್ಲಿ ರೈಲು ಹತ್ತಲಿದ್ದಾರೆ ಎಂಬ ಮಾಹಿತಿ ಶನಿವಾರ ಸಂಜೆ ಸಿಕ್ಕಿದ ಬಳಿಕ ರೈಲ್ವೆ ಪೋಲಿಸರು ಅವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು.

ಐವರು ಮಹಿಳೆಯರು ಮತ್ತು ಆರು ಪುರುಷರು ಸೇರಿದಂತೆ 11 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದ್ದು, ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಲು ಯಾವುದೇ ಮಾನ್ಯ ಪ್ರಯಾಣ ದಾಖಲೆಗಳು ಅವರ ಬಳಿಯಲ್ಲಿರಲಿಲ್ಲ ಎಂದು ಪೋಲಿಸರು ತಿಳಿಸಿದರು.

ಈ ಬಾಂಗ್ಲಾದೇಶಿಗಳು ಜೀವನೋಪಾಯವನ್ನು ಕಂಡುಕೊಳ್ಳಲು ಚೆನ್ನೈ,ಮುಂಬೈ ಮತ್ತು ಕೋಲ್ಕತಾಕ್ಕೆ ತೆರಳಲು ಯೋಜಿಸಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಮಾನವ ಕಳ್ಳ ಸಾಗಣೆ ಪ್ರಯತ್ನಗಳ ಸಾಧ್ಯತೆಯನ್ನು ನಾವು ತಳ್ಳಿ ಹಾಕುವಂತಿಲ್ಲ ಮತ್ತು ಆ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದೇವೆ ಎಂದು ಪೋಲಿಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News