ʼಪೆಗಾಸಸ್ʼನಂಥ ಸ್ಪೈವೇರ್ ದಾಳಿ: ಭಾರತೀಯ ಐಫೋನ್ ಬಳಕೆದಾರರಿಗೆ ಆ್ಯಪಲ್ ಎಚ್ಚರಿಕೆ
ಹೊಸದಿಲ್ಲಿ: ಪೆಗಾಸಸ್‍ನಂಥ ಸ್ಪೈವೇರ್ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಭಾರತದ ಐಫೋನ್ ಬಳಕೆದಾರರಿಗೆ ಆ್ಯಪಲ್ ಸಂಸ್ಥೆ ಎಚ್ಚರಿಕೆ ನೀಡಿದೆ.
ಸ್ಪೈವೇರ್ ನಿಮ್ಮ ಸಾಧನದ ನಿಯಂತ್ರಣ ಪಡೆಯುವ ಸಾಧ್ಯತೆ ಇದೆ ಎಂದು ಭಾರತ ಹಾಗೂ ಇತರ 98 ದೇಶಗಳ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಇದು 2021ರ ಬಳಿಕ ನೀಡುತ್ತಿರುವ ಎರಡನೇ ಇಂಥ ಎಚ್ಚರಿಕೆಯಾಗಿದೆ. ಆ್ಯಪಲ್ ಈ ಸಂಬಂಧದ ನೋಟಿಫಿಕೇಶನ್ ಅನ್ನು 150 ದೇಶಗಳ ಬಳಕೆದಾರರಿಗೆ ನೀಡಿದೆ.
"ಎನ್‍ಎಸ್‍ಒ ಸಮೂಹದ ಪೆಗಾಸಸ್ ಬಳಸುವಂಥ ಬಳಕೆದಾರರಿಗೆ ಮರ್ಸೆನರಿ ಸ್ಪೈವೇರ್ ದಾಳಿ ಸಾಧ್ಯತೆ ಇದ್ದು, ಇದು ತೀರಾ ಅಪರೂಪವಾದರೂ, ಸಾಮಾನ್ಯ ಸೈಬರ್ ಅಪರಾಧ ಚಟುವಟಿಕೆಗಳು ಅಥವಾ ಗ್ರಾಹಕ ಮಾಲ್‍ವೇರ್ ಗಿಂತ ಅತಿ ನಾಜೂಕಾದ ವಿಧಾನದವಾಗಿದೆ" ಎಂದು ಆ್ಯಪಲ್ ಹೇಳಿದೆ.
ಲಕ್ಷಾಂತರ ಡಾಲರ್ ವೆಚ್ಚದ ಐಫೋನ್ ಬಳಕೆದಾರರನ್ನು ಇಂಥ ದಾಳಿಗಳು ಗುರಿ ಮಾಡುವ ಸಾಧ್ಯತೆ ಇದೆ. ಜತೆಗೆ ಸಣ್ಣ ಸಂಖ್ಯೆಯ ಜನರ ಮೇಲೆ ಈ ದಾಳಿ ನಿಯೋಜಿಸಲಾಗಿದೆ. ಆದರೆ ಈ ಗುರಿ ಮಾಡುವಿಕೆ ಮುಂದುವರಿದಿದೆ ಹಾಗೂ ಜಾಗತಿಕವಾಗಿದೆ ಎಂದು ಎಚ್ಚರಿಸಿದೆ.