ಪ್ರಾಣಿ ಸಂರಕ್ಷಣಾ ಸಮಾಜದ ಅಧ್ಯಕ್ಷನಾಗಿ ಬಿಷ್ಣೋಯಿ ಆಯ್ಕೆ

Update: 2024-10-30 15:49 GMT

ಲಾರೆನ್ಸ್ ಬಿಷ್ಣೋಯಿ |  PTI

ಚಂಡೀಗಢ : ಗ್ಯಾಂಗ್‌ ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಅಖಿಲ ಭಾರತ ಪ್ರಾಣಿ ಸಂರಕ್ಷಣಾ ಬಿಷ್ಣೋಯಿ ಸಮಾಜದ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. 33 ವರ್ಷದ ಗ್ಯಾಂಗ್‌ಸ್ಟರ್ ಈಗ ಅಹ್ಮದಾಬಾದ್‌ನಲ್ಲಿರುವ ಸಾಬರಮತಿ ಸೆಂಟ್ರಲ್ ಜೈಲಿನಲ್ಲಿದ್ದಾನೆ.

ಬಿಷ್ಣೋಯಿ ಪಂಜಾಬ್, ಹರ್ಯಾಣ, ರಾಜಸ್ಥಾನ, ದಿಲ್ಲಿ ಮತ್ತು ಮುಂಬೈಯಲ್ಲಿ ದಾಖಲಾಗಿರುವ 35ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಅದೂ ಅಲ್ಲದೆ, ಅವನು ಭಾರತ ಸರಕಾರದ ಆಣತಿಯಂತೆ ಕೆನಡದಲ್ಲಿ ಕೊಲೆಗಳನ್ನು ನಡೆಸುವ ಗುತ್ತಿಗೆಗಳನ್ನು ವಹಿಸಿಕೊಂಡಿದ್ದಾನೆ ಎಂಬುದಾಗಿ ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಇತ್ತೀಚೆಗೆ ಆರೋಪಿಸಿದ್ದಾರೆ.

ಪಂಜಾಬ್‌ ನ ಅಬೊಹರ್‌ ನಲ್ಲಿ ಮಂಗಳವಾರ ನಡೆದ ಬಿಷ್ಣೋಯಿ ಸಮಾಜದ ಸಭೆಯೊಂದರಲ್ಲಿ ಬಿಷ್ಣೋಯಿಯನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News