ಅಯೋಧ್ಯೆಯಲ್ಲಿ ಬಿಜೆಪಿಯಿಂದ ಭೂ ಹಗರಣ : ಅಖಿಲೇಶ್ ಯಾದವ್ ಆರೋಪ
Update: 2024-09-12 16:12 GMT
ಲಕ್ನೋ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾರೀ ಭೂ ಹಗರಣದಲ್ಲಿ ಆಡಳಿತಾರೂಢ ಬಿಜೆಪಿ ನಾಯಕರು ಮತ್ತು ಸರಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಮಾಜವಾದಿ ಪಾರ್ಟಿ(ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಗುರುವಾರ ಇಲ್ಲಿ ಆರೋಪಿಸಿದರು.
ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಪವಿತ್ರ ನಗರಿಯಲ್ಲಿ ನಡೆಯುತ್ತಿರುವ ಭೂ ಕಬಳಿಕೆಯು ಅಧಿಕಾರದಲ್ಲಿರುವವರ ಭಾರೀ ಭ್ರಷ್ಟಾಚಾರದ ಭಾಗವಾಗಿದೆ ಎಂದರು.
‘ಅಧಿಕಾರಿಗಳು ಮತ್ತು ಬಿಜೆಪಿ ಸದಸ್ಯರು ಲೂಟಿಯಲ್ಲಿ ತೊಡಗಿದ್ದಾರೆ. ಲೂಟಿ ನಡೆಯುತ್ತಿದ್ದರೆ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಅಯೋಧ್ಯೆಯಲ್ಲಿ ಲೂಟಿಯ ಕರಾಳ ವಾಸ್ತವನ್ನು ಬಯಲಿಗೆಳೆದಿದ್ದಕ್ಕಾಗಿ ನಮ್ಮ ಪಕ್ಷದ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದ ಅವರು, ಅಯೋಧ್ಯೆಯಂತಹ ಪವಿತ್ರ ಕ್ಷೇತ್ರದಲ್ಲಿಯೇ ಇಂತಹ ಲೂಟಿಗಳು ನಡೆದಿವೆ ಎಂದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಅವರು ಇನ್ನೆಷ್ಟು ಲೂಟಿ ನಡೆಸಿರಬಹುದು ಎಂದು ಊಹಿಸಿ ಎಂದರು.