ಬಿಜೆಪಿ ರೋಡ್ ಶೋ ವೇಳೆ ʼಜೈ ಶ್ರೀರಾಮ್ʼ ಘೋಷಣೆ ಕೂಗುವಾಗ ಕೈ ಮೇಲಕ್ಕೆತ್ತಿದ್ದ ಉದ್ಯಮಿಯ 36,000 ರೂ. ಕಳವು
ಮೀರತ್: ಉತ್ತರ ಪ್ರದೇಶದ ಮೀರತ್‌ನಲ್ಲಿ ರಾಮಾಯಣ ತಾರೆಯರ ಬಿಜೆಪಿ ರೋಡ್ ಶೋ ವೇಳೆ ಜೈ ಶ್ರೀ ರಾಮ್ ಘೋಷಣೆ ಮೊಳಗಿಸುವಾಗ ತನ್ನೆರಡೂ ಕೈಗಳನ್ನು ಮೇಲಕ್ಕೆತ್ತಿದ್ದ ಉದ್ಯಮಿಯೊಬ್ಬರಿಗೆ ನಂತರ ತಾವು ಈ ಸಂದರ್ಭ ಪಿಕ್‌ಪಾಕೆಟ್‌ಗೊಳಗಾಗಿ ರೂ 36000 ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು indiatoday.in ವರದಿ ಮಾಡಿದೆ.
ಈ ರೋಡ್ ಶೋ ವೇಳೆ ತಮ್ಮ ಪರ್ಸ್ ಮತ್ತು ಮೊಬೈಲ್‌ಗಳನ್ನು ಕಳೆದುಕೊಂಡ ಸುಮಾರು ಒಂದು ಡಜನ್ ಜನರಲ್ಲಿ ಕುಲಭೂಷಣ್ ಕೂಡ ಸೇರಿದ್ದರು.
ಮೀರತ್‌ನಲ್ಲಿ ರಾಮಾಯಣ ಟಿವಿ ಧಾರಾವಾಹಿಯ ರಾಮನಾಗಿದ್ದ ಬಿಜೆಪಿಯ ಮೀರತ್ ಅಭ್ಯರ್ಥಿ ಅರುಣ್ ಗೋವಿಲ್ ಸಹಿತ ರಾಮಾಯಣದ ಸೀತೆ, ದೀಪಿಕಾ ಚಿಖ್ಲಿಯಾ ಹಾಗೂ ಲಕ್ಷ್ಮಣ ಪಾತ್ರಧಾರಿ ಸುನಿಲ್ ಲಹರಿ ರೋಡ್ ಶೋ ನಡೆಸಿದ್ದರು.
ಈ ರೋಡ್ ಶೋ ವೇಳೆ ಪರ್ಸ್ ಮೊಬೈಲ್ ಕಳೆದುಕೊಂಡ ಪತ್ರಕರ್ತರು, ಓರ್ವ ಬಿಜೆಪಿ ನಾಯಕ ಸಹಿತ ಹಲವು ಜನರು ಪೊಲೀಸ್ ದೂರು ದಾಖಲಿಸಿದ್ದಾರೆ.
ಉದ್ಯಮಿ ಕುಲಭೂಷಣ್ ಪ್ರತಿಕ್ರಿಯಿಸಿ “ರೋಡ್ ಶೋದಲ್ಲಿ ಜೈ ಶ್ರೀ ರಾಮ್ ಘೋಷಣೆ ಮೊಳಗಿಸಿ ನಂತರ ವಾಪಸಾಗಿ ಕಿಸೆ ನೋಡಿದಾಗ ಹಣವಿರಲಿಲ್ಲ, ರೂ 36,000 ಕಳೆದುಕೊಂಡು ಅಲ್ಲಿಯೇ ಪ್ರಜ್ಞೆ ತಪ್ಪಿದೆ,” ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ಅಲೋಕ್ ಸಿಸೋಡಿಯಾ ಕೂಡ ತಾವು ಮೊಬೈಲ್ ಫೋನ್ ಕಳೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ಪೊಲೀಸರು ದಿಲ್ಲಿ ನಿವಾಸಿಗಳಾಗಿದ್ದ ಮೂವರನ್ನು ಬಂಧಿಸಿ ಅವರಿಂದ ಕಳ್ಳತನಗೈದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದಿಲ್ಲಿ ನೋಂದಣಿ ಸಂಖ್ಯೆಯಿರುವ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.
UP : मेरठ में दुकानदार कुलभूषण BJP का रोड शो देखने दुकान से बाहर आए। "जय श्री राम" का नारा लगाने को दोनों हाथ ऊपर उठाए थे, इतने में जेब से किसी ने 36 हजार रुपए चुरा लिए। पीड़ित व्यापारी को सुनिए–pic.twitter.com/DP1O2G0UTU
— Sachin Gupta (@SachinGuptaUP) April 22, 2024