ರಾಜಸ್ಥಾನ ಉಪಮುಖ್ಯಮಂತ್ರಿಗೆ ಕೊಲೆ ಬೆದರಿಕೆ: ಜೈಪುರ ಸೆಂಟ್ರಲ್ ಜೈಲಿನಿಂದ ಮೂವರು ವಶಕ್ಕೆ
Update: 2025-03-27 20:23 IST

ಪ್ರೇಮಚಂದ ಭೈರ್ವಾ | PC : PTI
ಜೈಪುರ: ರಾಜಸ್ಥಾನದ ಉಪಮುಖ್ಯಮಂತ್ರಿ ಪ್ರೇಮಚಂದ ಭೈರ್ವಾ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ ಎನ್ನಲಾಗಿದ್ದು, ಈ ಸಂಬಂಧ ಗುರುವಾರ ಜೈಪುರ ಸೆಂಟ್ರಲ್ ಜೈಲಿನಿಂದ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಜಿಪಿ ಉತ್ಕಲ ರಂಜನ್ ಸಾಹೂ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಾಹೂ, ಪೋಲಿಸ್ ನಿಯಂತ್ರಣ ಕೊಠಡಿಗೆ ಜೀವ ಬೆದರಿಕೆಯನ್ನು ಮಾಡಲಾಗಿತ್ತೆನ್ನಲಾದ ಮೊಬೈಲ್ ಫೋನ್ ನ ಲೊಕೇಷನ್ ಜೈಪುರ್ ಸೆಂಟ್ರಲ್ ಜೈಲಿನಲ್ಲಿ ಪತ್ತೆ ಹಚ್ಚಲಾಗಿದ್ದು, ಅದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಕೆಳಹಂತದಲ್ಲಿ ವ್ಯವಸ್ಥೆಯಲ್ಲಿನ ಲೋಪಗಳಿಂದಾಗಿ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳು ಜೈಲ್ನ್ನು ತಲುಪುತ್ತವೆ ಎಂದು ತಿಳಿಸಿದರು.
ಯಾರಾದರೂ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ಜೈಲಿನೊಳಗೆ ತಲುಪಿಸಿದ್ದರೂ ಅವುಗಳನ್ನು ನಿರ್ಬಂಧಿಸಲು ಜೈಲುಗಳಲ್ಲಿ ಹೈ-ಟೆಕ್ ಜಾಮರ್ ಸಿಸ್ಟಮ್ ಅಳವಡಿಸಲಾಗುವುದು ಎಂದರು.