ಹರ್ಯಾಣದ ಬಿಜೆಪಿಯ ಮಾಜಿ ಶಾಸಕಿ ರೋಹಿತಾ ರೇವಡಿ ಕಾಂಗ್ರೆಸ್ ತೆಕ್ಕೆಗೆ
Update: 2024-05-14 22:10 IST

ರೋಹಿತಾ ರೇವಡಿ | PC : X
ಚಂಡಿಗಡ : ಪಾಣಿಪತ್ ನಗರದ ಬಿಜೆಪಿಯ ಮಾಜಿ ಶಾಸಕಿ ರೋಹಿತಾ ರೇವಡಿ ಮಂಗಳವಾರ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
ರೇವಡಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ರೇವಡಿಯವರ ಸೇರ್ಪಡೆಯು ಪಾಣಿಪತ್ ಪ್ರದೇಶದಲ್ಲಿ ಕಾಂಗ್ರೆಸ್ ಹಿಡಿತವನ್ನು ಬಲಗೊಳಿಸಲಿದೆ ಎಂದು ಹೇಳಿದರು.
ಬಿಜೆಪಿಯಲ್ಲಿ ತನಗೆ ಸೂಕ್ತ ಗೌರವ ದೊರಕಿರಲಿಲ್ಲ. ಹೀಗಾಗಿ ಆ ಪಕ್ಷವನ್ನು ತೊರೆದಿದ್ದಾಗಿ ರೇವಡಿ ಸುದ್ದಿಗಾರರಿಗೆ ತಿಳಿಸಿದರು.