ಪಾಕಿಸ್ತಾನದಲ್ಲಿ ಭಾರತೀಯ ಮಿಷನ್ ಮುಖ್ಯಸ್ಥರಾಗಿ ಗೀತಾ ಶ್ರೀವಾಸ್ತವ

Update: 2023-08-29 13:08 GMT

Geetika Srivastava | Photo : twitter \ @IndianExpress

ಹೊಸದಿಲ್ಲಿ: 2005ರ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿ ಗೀತಿಕಾ ಶ್ರೀವಾಸ್ತವ ಅವರು ಇಸ್ಲಾಮಾಬಾದ್‌ನಲ್ಲಿ ನೂತನ ಚಾರ್ಜ್ ಡಿ ಅಫೇರ್ಸ್ (CDA) ಆಗಲಿದ್ದಾರೆ.

ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ ಶ್ರೀವಾಸ್ತವ ಅವರು ಭಾರತಕ್ಕೆ ಮರಳುವ ಸಾಧ್ಯತೆಯಿರುವ ಡಾ.ಎಂ.ಸುರೇಶ ಕುಮಾರ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಪರಸ್ಪರರ ರಾಜಧಾನಿಗಳಲ್ಲಿ ರಾಯಭಾರಿಗಳನ್ನು ಹೊಂದಿಲ್ಲ,ಹೀಗಾಗಿ ಶ್ರೀವಾಸ್ತವ ಅವರು ಇಸ್ಲಾಮಾಬಾದ್‌ನಲ್ಲಿ ಅತ್ಯಂತ ಹಿರಿಯ ಭಾರತೀಯ ರಾಜತಾಂತ್ರಿಕರಾಗಿರುತ್ತಾರೆ.

2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ಪಾಕಿಸ್ತಾನವು ಭಾರತಕ್ಕೆ ತನ್ನ ರಾಜತಾಂತ್ರಿಕ ಪ್ರಾತಿನಿಧ್ಯದ ಸ್ಥಾನಮಾನವನ್ನು ಕೆಳದರ್ಜೆಗಿಳಿಸಿತ್ತು.

ಇಸ್ಲಾಮಾಬಾದ್‌ಗೆ ಕೊನೆಯ ಭಾರತೀಯ ರಾಯಭಾರಿಯಾಗಿದ್ದ ಅಜಯ ಬಿಸಾರಿಯಾ ಅವರನ್ನು ಪಾಕಿಸ್ತಾನದ ಕ್ರಮದ ಬಳಿಕ ಹಿಂದೆ ಕರೆಸಿಕೊಳ್ಳಲಾಗಿತ್ತು. ಆಗಿನಿಂದ ಉಭಯ ದೇಶಗಳಲ್ಲಿಯ ರಾಯಭಾರ ಕಚೇರಿಗಳು ಜಂಟಿ ಕಾರ್ಯದರ್ಶಿ ದರ್ಜೆಯ ಸಿಡಿಎ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಶ್ರೀವಾಸ್ತವ ಪಾಕಿಸ್ತಾನದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಯ ಮೊದಲ ಮಹಿಳಾ ಮುಖ್ಯಸ್ಥೆಯಾಗಲಿದ್ದಾರೆ. 22 ಪುರುಷರ ಬಳಿಕ ಈ ಹುದ್ದೆಯು ಮಹಿಳೆಗೆ ಒಲಿದಿದೆ.

ತನ್ನ ವಿದೇಶಿ ಭಾಷೆ ತರಬೇತಿಯ ಅಂಗವಾಗಿ ಮ್ಯಾಂಡರಿನ್ ಕಲಿತಿರುವ ಶ್ರೀವಾಸ್ತವ 2007-09ರ ಅವಧಿಯಲ್ಲಿ ಚೀನಾದಲ್ಲಿಯ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಕೋಲ್ಕತಾದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಲ್ಲಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಹಿಂದು ಮಹಾಸಾಗರ ಪ್ರದೇಶ ವಿಭಾಗದ ನಿರ್ದೇಶಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News