ಗೋಧ್ರಾ ರೈಲು ದಹನ ಪ್ರಕರಣ | ಫೆ. 13ರಂದು ಸುಪ್ರೀಂನಿಂದ ಮೇಲ್ಮನವಿಯ ಅಂತಿಮ ವಿಚಾರಣೆ

Update: 2025-01-16 16:51 GMT

 ಸುಪ್ರೀಂ ಕೋರ್ಟ್ | PC : PTI  

ಹೊಸದಿಲ್ಲಿ : 2002ರ ಗೋಧ್ರಾ ರೈಲು ದಹನ ಪ್ರಕರಣದ ಇತರ ಹಲವು ದೋಷಿಗಳು ಹಾಗೂ ಗುಜರಾತ್ ಸರಕಾರ ಸಲ್ಲಿಸಿದ ಮೇಲ್ಮನವಿಯ ಅಂತಿಮ ವಿಚಾರಣೆಯನ್ನು ಫೆಬ್ರವರಿ 13ರಂದು ನಡೆಸಲಾಗುವುದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಗುಜರಾತ್ ಉಚ್ಚ ನ್ಯಾಯಾಲಯದ 2017 ಅಕ್ಟೋಬರ್‌ನ ಆದೇಶದ ವಿರುದ್ಧ ಈ ಮೇಲ್ಮನವಿ ಸಲ್ಲಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ಅರವಿಂದ ಕುಮಾರ್ ಅವರ ಪೀಠ, ಮುಂದಿನ ದಿನಾಂಕದ ವಿಚಾರಣೆಯ ನಂತರ ವಿಚಾರಣೆಯನ್ನು ಮುಂದೂಡುವುದಿಲ್ಲ ಎಂದು ಹೇಳಿತು.

2002ರ ಫೆಬ್ರವರಿ 27ರಂದು ಗುಜರಾತ್‌ನ ಗೋಧ್ರಾದಲ್ಲಿ ಸಬರ್ಮತಿ ಎಕ್ಸ್‌ಪ್ರೆಸ್‌ನ ಬೋಗಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದ 59 ಮಂದಿ ಸಾವನ್ನಪ್ಪಿದ್ದರು. ಅನಂತರ ರಾಜ್ಯದಲ್ಲಿ ವ್ಯಾಪಕ ಕೋಮು ಗಲಭೆ ಸಂಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News