ಭೌತಿಕ ರೂಪದಲ್ಲೇ ನೀಟ್-ಯುಜಿ ಪರೀಕ್ಷೆ: ಎನ್‌ಟಿಎ

Update: 2025-01-16 16:50 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ : ವೈದ್ಯಕೀಯ ಪರೀಕ್ಷೆ ನೀಟ್-ಯುಜಿಯನ್ನು ಪೆನ್ ಹಾಗೂ ಪೇಪರ್ (ಒಎಂಆರ್ ಆಧಾರಿತ)ರೂಪದಲ್ಲಿ ಒಂದೇ ದಿನ ಪಾಳಿಯಲ್ಲಿ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ತಿಳಿಸಿದೆ.

ಶಿಕ್ಷಣ ಹಾಗೂ ಆರೋಗ್ಯ ಸಚಿವಾಲಯಗಳ ನಡುವಿನ ಸಮಾಲೋಚನೆಯ ಬಳಿಕ ತೆಗೆದುಕೊಳ್ಳಲಾದ ಈ ನಿರ್ಧಾರ ನೀಟ್-ಯುಜಿ ಪರೀಕ್ಷೆಯನ್ನು ಆನ್‌ಲೈನ್ ರೂಪಕ್ಕೆ ಪರಿವರ್ತಿಸುವ ಕುರಿತ ವದಂತಿಗಳಿಗೆ ತೆರೆ ಎಳೆದಿದೆ.

ಈ ಹಿಂದೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಪರೀಕ್ಷೆಯನ್ನು ಆನ್‌ಲೈನ್ ಮೂಲಕ ಮಾಡಬೇಕೇ ಅಥವಾ ಭೌತಿಕ ರೂಪದಲ್ಲೇ ಮಾಡಬೇಕೇ ಎಂಬ ಬಗ್ಗೆ ಶೀಘ್ರದಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News