ಎಕ್ಸ್ ಬಳಕೆದಾರರ ಪ್ರಶ್ನೆಗಳಿಗೆ ಪ್ರಚೋದನಾಕಾರಿ ಉತ್ತರ : ಎಲಾನ್ ಮಸ್ಕ್ ಅವರ ʼಗ್ರೋಕ್ ʼವಿರುದ್ಧ ಕ್ರಮಕ್ಕೆ ಮುಂದಾದ ಸರಕಾರ!

ಹೊಸದಿಲ್ಲಿ: ಎಕ್ಸ್ ಖಾತೆ ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ಪ್ರಚೋದನಕಾರಿ ಉತ್ತರಗಳನ್ನು ನೀಡಿದರೆ ʼಗ್ರೊಕ್ʼ ಚಾಟ್ ಬೋಟ್ ವಿರುದ್ಧ ಸರಕಾರ ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳನ್ನುಲ್ಲೇಖಿಸಿ Times of India ವರದಿ ಮಾಡಿದೆ.
ನೆಲದ ಕಾನೂನಿಗೆ ಅನುಗುಣವಾಗಿ ಎಕ್ಸ್ (ಹಳೆಯ ಟ್ವಿಟರ್) ತನ್ನ ವಿಷಯವನ್ನು ತೆಗೆದು ಹಾಕಬೇಕೆಂದೂ ಸರ್ಕಾರ ಸಾಮಾಜಿಕ ಜಾಲತಾಣ ಸಂಸ್ಥೆಗೆ ಹೇಳಿದೆ.
ಭಾರತೀಯ ಸರ್ಕಾರದ ಕಾನೂನುಬಾಹಿರ ವಿಷಯ ನಿಯಂತ್ರಣ ಮತ್ತು ಅನಿಯಂತ್ರಿತ ಸೆನ್ಸಾರ್‌ಶಿಪ್ ಅನ್ನು ಪ್ರಶ್ನಿಸಿ ಎಕ್ಸ್ ಸಂಸ್ಥೆ ಈಗಾಗಲೇ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ಒಡೆತನದ ಎಕ್ಸ್ ಇತ್ತೀಚೆಗೆ ಎಐ ಆಧಾರಿತ ಚಾಟ್ ಬೋಟ್ ಅನ್ನು ಆರಂಭಿಸಿದ್ದು, ಬಳಕೆದಾರರು ಕೇಳಿದ ಪ್ರಶ್ನೆಗಳಿಗೆ ʼಗ್ರೊಕ್ʼ ನೀಡುತ್ತಿರುವ ಉತ್ತರವು ಸಾಕಷ್ಟು ಗಮನ ಸೆಳೆಯುತ್ತಿದೆ.
ಬಳಕೆದಾರರು ಕೇಳಿದ ಪ್ರಶ್ನೆಗಳಿಗೆ ʼಗ್ರೊಕ್ʼ ಹಿಂದಿಯಲ್ಲಿ ನೀಡುತ್ತಿರುವ ಉತ್ತರವು ಸಾಕಷ್ಟು ಗಮನ ಸೆಳೆಯುತ್ತಿದ್ದು, ಅದರಲ್ಲಿ ಬಳಸಲಾಗಿರುವ ನಿಂದನಾತ್ಮಕ ಪದ ಹಾಗೂ ಶೈಲಿಯು ಚರ್ಚೆಗೆ ಕಾರಣವಾಗಿದೆ.