ಗುಜರಾತ್ | ಷಷ್ಠಿಪೂರ್ತಿ ಆಚರಿಸಿಕೊಂಡ 64 ವರ್ಷಗಳ ಹಿಂದೆ ಊರು ಬಿಟ್ಟು ಪರಾರಿಯಾಗಿದ್ದ ದಂಪತಿಗಳು!

PC : Instagram/ kankoo_tha
ಅಹಮದಾಬಾದ್: ಗುಜರಾತ್ ನ ಹರ್ಷ್ ಮತ್ತು ಮೃದು ದಂಪತಿಗಳು ಹೃದಯಸ್ಪರ್ಶಿ ಹಾಗೂ ಅರ್ಥಪೂರ್ಣವಾಗಿ ತಮ್ಮ 64ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.
ಆರು ದಶಕಗಳ ಹಿಂದೆ ತಮ್ಮ ವಿವಾಹೋತ್ಸವದಿಂದ ನಿರಾಕರಣೆಗೊಳಗಾಗಿದ್ದ ಈ ದಂಪತಿಗಳು, ಮೊಮ್ಮಕ್ಕಳು ಹಾಗೂ ಕುಟುಂಬದ ಸದಸ್ಯರ ಬೆಚ್ಚಗಿನ ಪ್ರೀತಿಯ ನಡುವೆ ತಮ್ಮ 80ನೇ ವಯಸ್ಸಿನಲ್ಲಿ ಷಷ್ಠಿಪೂರ್ತಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
1960ರಲ್ಲಿ ಪ್ರಾರಂಭಗೊಂಡ ಹರ್ಷ್ ಹಾಗೂ ಮೃದು ದಂಪತಿಗಳ ಪ್ರೇಮಕತೆಯೂ ರೋಚಕವಾಗಿದೆ. ಅಂತರ್ಜಾತಿ ವಿವಾಹಗಳ ಬಗ್ಗೆ ಕಟ್ಟುನಿಟ್ಟಿನ ವಿರೋಧವಿದ್ದ ಆಗಿನ ಸಾಮಾಜಿಕ ಪದ್ಧತಿಯಲ್ಲಿ ಶಾಲೆಯಲ್ಲಿ ಭೇಟಿಯಾಗಿದ್ದ ಜೈನ ಸಮುದಾಯದ ಹರ್ಷ್ ಹಾಗೂ ಬ್ರಾಹ್ಮಣ ಸಮುದಾಯದ ಮೃದು ದಂಪತಿಗಳ ನಡುವೆ ಪತ್ರಗಳ ವಿನಿಮಯದೊಂದಿಗೆ ಪ್ರೇಮಾಂಕುರವಾಗಿತ್ತು.
ಆದರೆ, ಹರ್ಷ್ ಹಾಗೂ ಮೃದು ನಡುವಿನ ಪ್ರೇಮ ಸಂಬಂಧವು ಮೃದು ಕುಟುಂಬದ ಸದಸ್ಯರ ಗಮನಕ್ಕೆ ಬಂದಾಗ, ಅವರು ಅಚಲವಾಗಿ ಅವರಿಬ್ಬರ ಸಂಬಂಧವನ್ನು ವಿರೋಧಿಸಿದ್ದರು. ಹೀಗಾಗಿ, ಯುವ ಜೋಡಿಗಳ ಪಾಲಿಗೆ ಹೃದಯ ಒಡೆದು ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ, ತಮ್ಮ ಪೋಷಕರ ಸಮ್ಮತಿಯ ಎದುರು ಪ್ರೇಮವನ್ನು ಆಯ್ದುಕೊಂಡಿದ್ದ ಹರ್ಷ್ ಹಾಗೂ ಮೃದು ದಂಪತಿಗಳು ಕುಟುಂಬದ ಸದಸ್ಯರ ಬೆಂಬಲವಿಲ್ಲದ ಅನಿಶ್ಚಿತ ಜೀವನ ತಮ್ಮೆದುರಿಗಿದ್ದರೂ, ಧೈರ್ಯದಿಂದ ಊರಿನಿಂದ ಪರಾರಿಯಾಗಿದ್ದರು. ಅವರಿಬ್ಬರೂ ಪ್ರೀತಿ ಮತ್ತು ಬದ್ಧತೆಯಿಂದ ತಮ್ಮ ಬದುಕು ಕಟ್ಟಿಕೊಳ್ಳಲು ಈ ಘಟನೆ ಕಾರಣವಾಗಿತ್ತು.
ವರ್ಷಗಳು ಕಳೆದಂತೆ ಅವರು ಸ್ನೇಹಮಯ ಕುಟುಂಬವನ್ನು ಮಾತ್ರ ಕಟ್ಟಿಕೊಳ್ಳಲಿಲ್ಲ, ಬದಲಿಗೆ ಆರಂಭದಲ್ಲಿ ತಮ್ಮ ಪೋಷಕರಿಂದ ನಿರಾಕರಣೆಗೊಳಗಾಗಿದ್ದ ಸಮ್ಮತಿಯನ್ನೂ ಪಡೆದರು. ನಂತರ, ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಸಾಮಾಜಿಕ ನಿರ್ಬಂಧಗಳನ್ನು ಮೀರಿ ಬೆಳೆದ ಅವರಿಬ್ಬರ ಪ್ರೇಮದ ಕತೆಗಳನ್ನು ಕೇಳುತ್ತಾ ಬೆಳೆದರು.
ಹರ್ಷ್ ಹಾಗೂ ಮೃದು ದಂಪತಿಗಳ ಅದ್ಭುತ ಜೀವನ ಪಯಣ ಹಾಗೂ ಅವರು ಮಾಡಿದ ತ್ಯಾಗಗಳನ್ನು ಗೌರವಿಸಲು, ಅವರ ಮೊಮ್ಮಕ್ಕಳು ಅವರಿಗಾಗಿ ಅಚ್ಚರಿಯ 64ನೇ ವಿವಾಹ ವಾರ್ಷಿಕೋತ್ಸವವನ್ನು ಆಯೋಜಿಸಿದ್ದರು. ಅವರಿಬ್ಬರು ತಮ್ಮ ಊರಿನಿಂದ ಪರಾರಿಯಾದ ನಂತರ ಇದೇ ಪ್ರಥಮ ಬಾರಿಗೆ ಈ ವಿಶೇಷ ದಿನಕ್ಕೆ ಸಿದ್ಧಗೊಳ್ಳಲು ಅವರಿಬ್ಬರನ್ನು ಕೆಲಕಾಲ ಪ್ರತ್ಯೇಕಿಸಲಾಗಿತ್ತು.
ಹರ್ಷ್ ಹಾಗೂ ಮೃದು ದಂಪತಿಗಳು ತಮ್ಮ ಯೌವನದಲ್ಲಿ ಕಳೆದುಕೊಂಡಿದ್ದ ಸಪ್ತಪದಿ ಸುತ್ತಬೇಕಾದ ಪವಿತ್ರ ಅಗ್ನಿಕುಂಡ ಸೇರಿದಂತೆ ಎಲ್ಲ ವೈವಾಹಿಕ ಸಂಪ್ರದಾಯಗಳನ್ನೂ ಈ 64ನೇ ವಿವಾಹ ವಾರ್ಷಿಕೋತ್ಸವ ಒಳಗೊಂಡಿತ್ತು. ಆ ಮೂಲಕ ಜೀವನದ ಎಲ್ಲ ಸವಾಲುಗಳನ್ನು ಎದುರಿಸಲು ಕಾರಣವಾಗಿದ್ದ ಅವರ ಪ್ರೀತಿ ಮತ್ತು ಬದ್ಧತೆಯನ್ನು ಈ ಸಂಭ್ರಮಾಚರಣೆ ಪುನರುಜ್ಜೀವನಗೊಳಿಸಿತು.