ಕೇಜ್ರಿವಾಲ್ ಕೋಮಾಕ್ಕೆ ಜಾರಬಹುದು : ಆಪ್

Update: 2024-07-15 15:52 GMT

ಅರವಿಂದ ಕೇಜ್ರಿವಾಲ್ |  PTI 

ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆರೋಗ್ಯ ಉತ್ತಮವಾಗಿದೆ ಎಂಬ ತಿಹಾರ್ ಜೈಲು ಅಧಿಕಾರಿಗಳ ಹೇಳಿಕೆಗಳನ್ನು ಆಪ್‌ನ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಸೋಮವಾರ ತರಾಟೆಗೆತ್ತಿಕೊಂಡಿದ್ದಾರೆ.

ಬಂಧನದ ಬಳಿಕ ಕೇಜ್ರಿವಾಲ್ 8.5 ಕೆ.ಜಿ. ತೂಕವನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ಐದು ಸಲ 50 mg/ಜಐ ಗಿಂತ ಕಡಿಮೆಯಾಗಿದೆ ಎಂದು ಸೋಮವಾರ ಆರೋಪಿಸಿದ ಸಿಂಗ್, ಕೈದಿಯ ವೈದ್ಯಕೀಯ ವರದಿಯನ್ನು ಬಿಡುಗಡೆಗೊಳಿಸುವ ಮೂಲಕ ಜೈಲು ಅಧಿಕಾರಿಗಳು ಅಪರಾಧವನ್ನೆಸಗಿದ್ದಾರೆ ಎಂದು ಹೇಳಿದರು. ಅಧಿಕಾರಿಗಳ ಹೇಳಿಕೆಗಳನ್ನು ಅವರು ಸಾರಾಸಗಟಾಗಿ ತಿರಸ್ಕರಿಸಿದರು.

‘ಏಮ್ಸ್ ವೈದ್ಯರ ತಂಡವು ಕೇಜ್ರಿವಾಲ್ ಅವರ ಆರೋಗ್ಯವನ್ನು ಪರೀಕ್ಷಿಸುತ್ತಿದೆ. ಅವರು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಹೈಪೊಗ್ಲೈಸೆಮಿಯಾ(ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿತ)ದಿಂದ ಬಳಲುತ್ತಿದ್ದಾರೆ. ಇದು ಅವರು ಕೋಮಾಕ್ಕೆ ಜಾರಲು ಅಥವಾ ಅವರ ಸಾವಿಗೂ ಕಾರಣವಾಗಬಹುದು. ಕೇಜ್ರಿವಾಲ್ ವಿರುದ್ಧದ ಸಂಚು ಅವರನ್ನು ಸಾವಿನತ್ತ ತಳ್ಳುತ್ತಿದೆ. ಏನಾದರೂ ಅಹಿತಕರ ಘಟನೆ ಸಂಭವಿಸಿದರೆ ಉತ್ತರವನ್ನು ಕಂಡುಕೊಳ್ಳುವುದು ಕೇಂದ್ರಕ್ಕೆ ಕಷ್ಟವಾಗಲಿದೆ. ಹೀಗಾಗಿ ಕೇಜ್ರಿವಾಲ್ ಜೀವದೊಂದಿಗೆ ಚೆಲ್ಲಾಟವಾಡದಂತೆ ನಾನು ಪ್ರಧಾನಿ ಮೋದಿಯವರನ್ನು ಆಗ್ರಹಿಸುತ್ತೇನೆ’ ಎಂದು ಸಿಂಗ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News