ಕುವೈತ್ ಅಗ್ನಿ ದುರಂತ | ಮೃತ ಬಿನೋಯ್ ಕುಟುಂಬಕ್ಕೆ ವಸತಿ ಯೋಜನೆಯಡಿ ಮನೆ ವಿತರಣೆ: ಕೇರಳ ಸರಕಾರ ಭರವಸೆ

Update: 2024-06-16 16:31 GMT

PC : PTI 

ತ್ರಿಶೂರ್ (ಕೇರಳ): ಇತ್ತೀಚೆಗೆ ಕುವೈತ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ಬಿನೋಯ್ ಥಾಮಸ್ ಕುಟುಂಬದ ಸದಸ್ಯರಿಗೆ ಲೈಫ್ ಮಿಷನ್ ವಸತಿ ಯೋಜನೆಯಡಿ ಮನೆ ವಿತರಿಸುವುದಾಗಿ ರವಿವಾರ ಕೇರಳ ಸರಕಾರ ಭರವಸೆ ನೀಡಿದೆ.

ತನ್ನ ಕುಟುಂಬದ ಸದಸ್ಯರಿಗೆ ಉತ್ತಮ ಮನೆ ನಿರ್ಮಿಸುವ ಹಾಗೂ ಅವರ ಜೀವನ ಮಟ್ಟವನ್ನು ಸುಧಾರಿಸುವ ಕನಸಿನೊಂದಿಗೆ ಅಗ್ನಿ ದುರಂತ ಸಂಭವಿಸಿದ ಕೇವಲ ಒಂದು ದಿನದ ಹಿಂದೆಯಷ್ಟೆ ಚವಕ್ಕಡ್ ನಿವಾಸಿಯಾದ ಬಿನೋಯ್ ಥಾಮಸ್ ಕುವೈತ್ ಗೆ ತೆರಳಿದ್ದರು ಎಂದು ಹೇಳಲಾಗಿದೆ.

ಸದ್ಯ ಮೂರು ಸೆಂಟ್ ಅಳತೆಯ ಜಾಗದಲ್ಲಿ ಥಾಮಸ್ ಕುಟುಂಬವು ತಾತ್ಕಾಲಿಕ ಗುಡಿಸಿಲಿನಲ್ಲಿ ವಾಸಿಸುತ್ತಿದೆ.

ಕೇರಳ ಕಂದಾಯ ಸಚಿವ ಕೆ.ರಾಜನ್ ಹಾಗೂ ಸಾಮಾಜಿಕ ನ್ಯಾಯ ಸಚಿವೆ ಆರ್.ಬಿಂದು ಇಬ್ಬರೂ ರವಿವಾರ ಥಾಮಸ್ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು.

ಜೂನ್ 12ರಂದು ಕುವೈತ್ ನ ಅಲ್ ಮಂಗಾಫ್ ನಗರದಲ್ಲಿನ ಕಟ್ಟಡವೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 45 ಮಂದಿ ಭಾರತೀಯರು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News