ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಸಿಎಂ ತಲೆಗೆ ಗಾಯ

Update: 2024-01-24 10:35 GMT

File Photo: PTI

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಠಾತ್‌ ಬ್ರೇಕ್‌ ಹಾಕಿದ ಪರಿಣಾಮ ಮಮತಾ ಅವರ ತಲೆಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ವರದಿಯಾಗಿದೆ.

ಮಮತಾ ಅವರು ಬರ್ಧಮಾನ್‌ನಿಂದ ಕೊಲ್ಕತ್ತಾಗೆ ಮರಳುತ್ತಿದಾಗ ಈ ಘಟನೆ ಸಂಭವಿಸಿದೆ. ಮಳೆ, ದಟ್ಟ ಮಂಜು ಹಾಗೂ ಕಡಿಮೆ ಗೋಚರತೆಯ ಕಾರಣ ಚಾಲಕ ಹಠಾತ್‌ ಬ್ರೇಕ್‌ ಹಾಕಿದರೆನ್ನಲಾಗಿದೆ.

ಮಮತಾ ಅವರನ್ನು ಸದ್ಯ ಕೊಲ್ಕತ್ತಾಗೆ ವಾಪಸ್‌ ಕರೆದೊಯ್ಯಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News