ಬಿಹಾರ: ವಿಶ್ವಾಸಮತ ಗೆದ್ದ ನಿತೀಶ್‌ ಕುಮಾರ್‌ ಸರ್ಕಾರ, ವಿಪಕ್ಷಗಳಿಂದ ಸಭಾತ್ಯಾಗ

Update: 2024-02-12 10:19 GMT

Photo: PTI

ಪಾಟ್ನಾ: ಬಿಹಾರದಲ್ಲಿ ಜೆಡಿ(ಯು) ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಮಹಾಮೈತ್ರಿಕೂಟದಿಂದ ಹೊರಬಂದು ಬಿಜೆಪಿ ಜೊತೆ ಕೈಜೋಡಿಸಿ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಇಂದು ರಾಜ್ಯ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಗೆದ್ದಿದ್ದಾರೆ.

ಬಿಜೆಪಿ-ಜೆಡಿ(ಯು) ಮೈತ್ರಿಕೂಟದಲ್ಲಿ ಒಟ್ಟು 128 ಸದಸ್ಯರಿದ್ದಾರೆ. ಬಿಹಾರ ವಿಧಾನಸಭೆಯ ಒಟ್ಟು ಬಲ 243 ಆಗಿದ್ದು ಬಹುಮತಕ್ಕೆ 122 ಸದಸ್ಯರ ಬೆಂಬಲ ಅಗತ್ಯವಿತ್ತು.

ವಿಪಕ್ಷಗಳಾದ ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್‌ ಮತ್ತು ಎಡ ಪಕ್ಷಗಳ ಶಾಸಕರು ಇಂದು ವಿಶ್ವಾಸಮತಕ್ಕೂ ಮುನ್ನ ಸಭಾ ತ್ಯಾಗ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News