ಸರಕಾರಿ ಮತ್ತು ಖಾಸಗಿ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ಋತುಚಕ್ರ ರಜೆಯನ್ನು ಪ್ರಕಟಿಸಿದ ಒಡಿಶಾ ಸರಕಾರ

Update: 2024-08-15 20:46 IST
ಸರಕಾರಿ ಮತ್ತು ಖಾಸಗಿ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ಋತುಚಕ್ರ ರಜೆಯನ್ನು ಪ್ರಕಟಿಸಿದ ಒಡಿಶಾ ಸರಕಾರ

   ಸಾಂದರ್ಭಿಕ ಚಿತ್ರ

  • whatsapp icon

ಭುವನೇಶ್ವರ : ಸರಕಾರಿ ಹಾಗೂ ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ರಜೆಯನ್ನು ಗುರುವಾರ ಒಡಿಶಾ ಉಪ ಮುಖ್ಯಮಂತ್ರಿ ಪ್ರವತಿ ಪರಿದ ಪ್ರಕಟಿಸಿದ್ದಾರೆ. ಆದರೆ, ಈ ರಜೆ ಐಚ್ಛಿಕವಾಗಿರಲಿದೆ.

ಕಟಕ್ ನಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆಯ ಸಚಿವರಾಗಿರುವ ಪರಿದ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

“ಮಹಿಳಾ ನೌಕರರು ತಮ್ಮ ಋತುಚಕ್ರದ ಮೊದಲು ಅಥವಾ ಎರಡನೆಯ ದಿನ ರಜೆಯನ್ನು ತೆಗೆದುಕೊಳ್ಳಬಹುದಾಗಿದೆ. ಆದರೆ, ಇದು ಐಚ್ಛಿಕವಾಗಿದೆ” ಎಂದು ಅವರು ತಿಳಿಸಿದ್ದಾರೆ.

ಕೀನ್ಯಾದ ನೈರೋಬಿಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಸಂಸ್ಥೆಯ ನಾಗರಿಕ ಸಮಾಜದ ವಿಚಾರಗೋಷ್ಠಿ 2024ರಲ್ಲಿ ಪಾಲ್ಗೊಂಡಿದ್ದ ಒಡಿಯಾ ಬಾಲಕಿಯೊಬ್ಬಳು ಋತುಚಕ್ರದ ಸಂದರ್ಭದಲ್ಲಿ ಪಾವತಿ ರಜೆಯನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಳು.

ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರಿಗೆ ವೇತನ ಸಹಿತ ರಜೆ ಮಂಜೂರು ಮಾಡಬೇಕು ಎಂದು ಈ ಅಂತಾರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ಪ್ರತಿನಿಧಿಗಳ ಗಮನವನ್ನು ಒಡಿಶಾದ ಮಹಿಳಾ ಹೋರಾಟಗಾರ್ತಿಯಾದ ರಂಜಿತಾ ಪ್ರಿಯದರ್ಶಿನಿ ಕೂಡಾ ಸೆಳೆದಿದ್ದರು.

ಋತುಚಕ್ರದ ಸಂದರ್ಭದಲ್ಲಿ ಜಗತ್ತಿನಾದ್ಯಂತದ ಮಹಿಳೆಯರು ದೈಹಿಕ ನೋವಿಗೆ ಗುರಿಯಾಗುತ್ತಾರೆ ಎಂದು ಅವರು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News