ಲೋಕಸಭೆಯ ಜಂಟಿ ಸಂಸದೀಯ ಸಮಿತಿಗೆ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ: ಸದಸ್ಯ ಬಲ 39ಕ್ಕೆ ಹೆಚ್ಚಳ
Update: 2024-12-20 06:24 GMT
ಹೊಸದಿಲ್ಲಿ: ವಿವಾದಿತ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯನ್ನು ಲೋಕಸಭೆಯ ಜಂಟಿ ಸಂಸದೀಯ ಸಮಿತಿಗೆ ವರ್ಗಾಯಿಸಲಾಗಿದೆ.
ಏಕಕಾಲಕ್ಕೆ ಚುನಾವಣೆಯನ್ನು ಪ್ರಸ್ತಾಪಿಸುವ ಎರಡು ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿದ್ದು, ಸಮಿತಿಯ ಸದಸ್ಯರ ಬಲ 31 ಸಂಸದರಿಂದ 39ಕ್ಕೆ ಏರಿಕೆ ಮಾಡಲಾಗಿದೆ.
ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯ 27 ಸದಸ್ಯರು ಮತ್ತು ರಾಜ್ಯಸಭೆಯ 12 ಸದಸ್ಯರನ್ನೊಳಗೊಂಡ ಜಂಟಿ ಸಮಿತಿಗೆ ಎರಡು ಮಸೂದೆಗಳನ್ನು ಉಲ್ಲೇಖಿಸುವ ಪ್ರಸ್ತಾಪವನ್ನು ಶುಕ್ರವಾರದ ಸದನದ ವ್ಯವಹಾರಗಳಲ್ಲಿ ಪಟ್ಟಿ ಮಾಡಿದ್ದರು.
ಸಮಿತಿಯು "ಒಂದು ರಾಷ್ಟ್ರದ ಒಂದು ಚುನಾವಣೆ" (ONOE) ಮಸೂದೆ, ಸಂವಿಧಾನಕ್ಕೆ ತಿದ್ದುಪಡಿಗೆ ಸಂಬಂಧಿಸಿ ಪರಿಶೀಲನೆ ನಡೆಸಲಿದೆ.
ಕೇಂದ್ರದ ಮಾಜಿ ಸಚಿವರಾದ ಅನುರಾಗ್ ಠಾಕೂರ್, ಪಿ.ಪಿ. ಚೌಧರಿ, ಭರ್ತೃಹರಿ ಮಹತಾಬ್ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಮಿತಿಗೆ ಪ್ರಸ್ತಾಪಿಸಿದ ಲೋಕಸಭಾ ಸದಸ್ಯರಲ್ಲಿ ಸೇರಿದ್ದಾರೆ.