ನಿವೃತ್ತಿ ವದಂತಿಯ ಕುರಿತು ರೋಹಿತ್ ಶರ್ಮಾ ಸ್ಪಷ್ಟನೆ

Update: 2025-01-04 16:10 GMT

ರೋಹಿತ್ ಶರ್ಮಾ | PC : ANI 

ಸಿಡ್ನಿ : ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದ ನಂತರ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಟೆಸ್ಟ್ ಭವಿಷ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿಲ್ಲ. ಕಳಪೆ ಫಾರ್ಮ್‌ನಿಂದಾಗಿ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದೇನೆ ಎಂದು ಶನಿವಾರ 2ನೇ ದಿನದಾಟದ ವೇಳೆ ಪ್ರಸಾರ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಮೂಲಕ ತನ್ನ ನಿವೃತ್ತಿಯ ವದಂತಿಗೆ ತೆರೆ ಎಳೆದರು.

ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿಲ್ಲ, ಕಳಪೆ ಫಾರ್ಮ್ ಕಾರಣಕ್ಕೆ ಆಡುವ 11ರ ಬಳಗದಿಂದ ಹೊರಗುಳಿಯಲು ನಿರ್ಧರಿಸಿದ್ದೆ. ಟೆಸ್ಟ್ ಪಂದ್ಯದಿಂದ ದೂರ ಉಳಿಯುವ ಯಾವುದೇ ಯೋಜನೆ ಇಲ್ಲ ಎಂದು ರೋಹಿತ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News