ಹೂಡಿಕೆ ಹಗರಣ: ಖ್ಯಾತ ಯೂಟ್ಯೂಬರ್ ಗೆ ಸೆಬಿ ನಿಷೇಧ

Update: 2024-12-20 05:53 GMT

ರವೀಂದ್ರ ಭಾರ್ತಿ (Photo credit: moneylife.in)

ಮುಂಬೈ: ಖ್ಯಾತ ಯೂಟ್ಯೂಬರ್ ರವೀಂದ್ರ ಬಾಬು ಭಾರ್ತಿ ಮತ್ತು ಅತನ ಸಂಸ್ಥೆಯಾದ ರವೀಂದ್ರ ಭಾರ್ತಿ ಎಜ್ಯುಕೇಶನ್ ಇನ್ಸ್ಟಿಟ್ಯೂಟ್ ಮೇಲೆ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿಷೇಧ ಹೇರಿದೆ. ಹೂಡಿಕೆ ಸಲಹೆ ವ್ಯವಹಾರವನ್ನು ನೋಂದಣಿ ಮಾಡದೇ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

2025ರ ಎಪ್ರಿಲ್ 4ರವರೆಗೆ ಸೆಕ್ಯುರಿಟಿ ಮಾರುಕಟ್ಟೆಗಳನ್ನು ಪ್ರವೇಶಿಸದಂತೆ ನಿಷೇಧಿಸಿರುವ ಸೆಬಿ, ಅನಧಿಕೃತ ಚಟುವಟಿಕೆಗಳ ಮೂಲಕ ಕ್ರೋಢೀಕರಿಸಿರುವ 9.5 ಕೋಟಿ ರೂಪಾಯಿಗಳನ್ನು ಮರಳಿಸುವಂತೆ ಆದೇಶಿಸಿದೆ.

ಭಾರ್ತಿ ಹಾಗೂ ಆತನ ಕಂಪನಿ ಅನನುಭವಿ ಹೂಡಿಕೆದಾರರನ್ನು ನೋಂದಾಯಿತವಲ್ಲದ ಹೂಡಿಕೆ ಸಲಹೆಗಳು, ವ್ಯಾಪಾರ ಶಿಫಾರಸ್ಸುಗಳು ಮತ್ತು ಜಾರಿ ಸೇವೆಗಳ ಮೂಲಕ ಷೇರು ಮಾರುಕಟ್ಟೆಯತ್ತ ಆಕರ್ಷಿಸುತ್ತಿದೆ. ಭಾರ್ತಿ ತಮ್ಮ ಎರಡು ಯೂಟ್ಯೂಬ್ ಚಾನಲ್ ನಲ್ಲಿ 19 ಲಕ್ಷ ಚಂದಾದಾರರನ್ನು ಹೊಂದಿದ್ದು, ಈತನ ಪ್ರಭಾವವು ಅಪಾಯಕಾರಿ ಹೂಡಿಕೆಯನ್ನು ಉತ್ತೇಜಿಸುತ್ತಿದೆ ಎಂದು ವಿವರಿಸಿದೆ.

ಹಲವು ಹೂಡಿಕೆ ಯೋಜನೆಗಳನ್ನು ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ ಅವರ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ಸೀಮಿತಗೊಳಿಸುತ್ತಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News