ಐಪಿಒ ಉಲ್ಲಂಘನೆಗಾಗಿ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಗೆ ನೋಟಿಸ್ ಜಾರಿಗೊಳಿಸಿದ ಸೆಬಿ : ವರದಿ

Update: 2024-08-26 14:19 GMT

 ವಿಜಯ್ ಶೇಖರ್ ಶರ್ಮ  | PC: X \ @vijayshekhar

ಬೆಂಗಳೂರು : ನವೆಂಬರ್ 2021ರ ಅವಧಿಯಲ್ಲಿ ಐಪಿಒ ಕುರಿತು ತಪ್ಪು ಮಾಹಿತಿಗಳನ್ನು ಒದಗಿಸಿರುವ ಆರೋಪಗಳ ಕುರಿತು ಆ ಅವಧಿಯಲ್ಲಿ ಸಂಸ್ಥೆಯಲ್ಲಿ ಹುದ್ದೆಗಳನ್ನು ಹೊಂದಿದ್ದ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮ ಹಾಗೂ ಮಂಡಳಿಯ ಸದಸ್ಯರಿಗೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ ಶೋಕಾಸ್ ನೋಟಿಸ್ ಗಳನ್ನು ಜಾರಿಗೊಳಿಸಿದೆ ಎಂದು ಸೋಮವಾರ Moneycontrol ವರದಿ ಮಾಡಿದೆ.

ಶರ್ಮರನ್ನು ಉದ್ದೇಶಿಸಿ ಜಾರಿಗೊಳಿಸಲಾಗಿರುವ ನೋಟಿಸ್ ನಲ್ಲಿ ಷೇರುದಾರರ ವರ್ಗೀಕರಣ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಕುರಿತು ಇಬ್ಬರು ವ್ಯಕ್ತಿಗಳಿಗೆ ತಿಳಿದಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಈ ಕುರಿತು Reuters ಸುದ್ದಿ ಸಂಸ್ಥೆ ಪ್ರತಿಕ್ರಿಯೆಗಾಗಿ ಪೇಟಿಎಂ ಹಾಗೂ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಯನ್ನು ಸಂಪರ್ಕಿಸಿದಾಗ, ಎರಡೂ ಸಂಸ್ಥೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ. ವರದಿಯ ಪ್ರಕಟಣೆಗೂ ಮುಂದೆ ಸ್ಥಿರವಾಗಿದ್ದ ಪೇಟಿಎಂ ಷೇರುಗಳ ದರವು, ವರದಿ ಪ್ರಕಟಣೆಯ ನಂತರ ಶೇ. 8.9ರಷ್ಟು ಕುಸಿತ ದಾಖಲಿಸಿದೆ.

ಸೆಬಿ ದತ್ತಾಂಶದ ಪ್ರಕಾರ, ಶರ್ಮರನ್ನು ಬೃಹತ್ ಷೇರುದಾರ ಎಂದು ವರ್ಗೀಕರಿಸುವ ಬದಲು ಸಾರ್ವಜನಿಕ ಷೇರುದಾರ ಎಂದು ವರ್ಗೀಕರಿಸಲಾಗಿದೆ ಹಾಗೂ ಪೇಟಿಎಂನ ಯಾವುದೇ ಹೂಡಿಕೆದಾರರನ್ನೂ ಬೃಹತ್ ಷೇರುದಾರರು ಎಂದು ವರ್ಗೀಕರಿಸಲಾಗಿಲ್ಲ ಎಂದು ಹೇಳಲಾಗಿದೆ.

ಪೇಟಿಎಂ ಐಪಿಎಂ ದಾಖಲೆಗಳನ್ನು ಹಾಜರುಪಡಿಸಿದ ಸಂದರ್ಭದಲ್ಲಿ ಶರ್ಮರನ್ನು ಬೃಹತ್ ಷೇರುದಾರ ಎಂದು ವರ್ಗೀಕರಿಸಬೇಕಿತ್ತೇ ಹೊರತು ಉದ್ಯೋಗಿ ಎಂದಲ್ಲ ಎಂಬುದರ ಸುತ್ತ ಈ ವಿವಾದ ಸೃಷ್ಟಿಯಾಗಿದೆ Moneycontrol ವರದಿಯಲ್ಲಿ ಹೇಳಲಾಗಿದೆ.

ಆ ಸಮಯದಲ್ಲಿ ಶರ್ಮರ ಬೃಹತ್ ಷೇರುದಾರನಲ್ಲ ಎಂಬ ನಿಲುವನ್ನು ಬೆಂಬಲಿಸಿರುವ ನಿರ್ದೇಶಕರನ್ನು ಸೆಬಿ ಪ್ರಶ್ನಿಸಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News