ಗಾಯಕಿಯ ಅತ್ಯಾಚಾರ ಪ್ರಕರಣ: ಮಾಜಿ ಶಾಸಕ ವಿಜಯ್ ಮಿಶ್ರಾಗೆ 15 ವರ್ಷಗಳ ಕಾರಾಗೃಹ ಶಿಕ್ಷೆ

Update: 2023-11-04 21:44 IST
ಗಾಯಕಿಯ ಅತ್ಯಾಚಾರ ಪ್ರಕರಣ: ಮಾಜಿ ಶಾಸಕ ವಿಜಯ್ ಮಿಶ್ರಾಗೆ 15 ವರ್ಷಗಳ ಕಾರಾಗೃಹ ಶಿಕ್ಷೆ

ಮಾಜಿ ಶಾಸಕ ವಿಜಯ್ ಮಿಶ್ರಾ (Photo: Facebook)

  • whatsapp icon

ಲಕ್ನೊ: ಇಪ್ಪತ್ತೆಂಟು ವರ್ಷದ ಗಾಯಕಿಯ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಶಾಸಕ ವಿಜಯ್ ಮಿಶ್ರಾಗೆ ಭದೋಹಿಯ ವಿಶೇಷ ಎಂಪಿ-ಎಂಎಲ್‌ಎ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಜ್ಞಾನಪುರ ಕ್ಷೇತ್ರದ ಶಾಸಕರಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದ ಮಿಶ್ರಾ ಅವರು ಸಮಾಜವಾದಿ ಪಕ್ಷದ ಮಾಜಿ ಸದಸ್ಯ. ಪ್ರಸಕ್ತ ಅವರು ಆಗ್ರಾ ಕಾರಾಗೃಹದಲ್ಲಿ ಇದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಭದೋಹಿ ನ್ಯಾಯಾಲಯ ಮಿಶ್ರಾ ಅವರನ್ನು ಶುಕ್ರವಾರ ದೋಷಿ ಎಂದು ಘೋಷಿಸಿತ್ತು ಹಾಗೂ ಮಿಶ್ರಾ ಅವರ ಪುತ್ರ ವಿಷ್ಣು ಹಾಗೂ ಸೋದರಳಿಯ ಜ್ಯೋತಿ ಅಲಿಯಾಸ್ ವಿಕಾಸ್ ಮಿಶ್ರಾ ಅವರನ್ನು ಖುಲಾಸೆಗೊಳಿಸಿತ್ತು.

ಇಬ್ಬರನ್ನೂ ಸಂಶಯದ ಲಾಭದ ಮೇರೆಗೆ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ಭದೋಹಿ ಜಿಲ್ಲಾಡಳಿತದ ಪರ ನ್ಯಾಯವಾದಿ ದಿನೇಶ್ ಪಾಂಡೆ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News