ರಾಜ್ಯಸಭೆಯ ಒಪ್ಪಿಗೆ ಬಳಿಕ ತಾಂತ್ರಿಕ ತಿದ್ದುಪಡಿಗಳೊಂದಿಗೆ ಎರಡು ಮಸೂದೆಗಳು ಲೋಕಸಭೆಯಲ್ಲಿ ಅಂಗೀಕಾರ
Update: 2025-03-27 20:26 IST

ಲೋಕಸಭೆ | PTI
ಹೊಸದಿಲ್ಲಿ: ಎರಡು ಮಸೂದೆಗಳಿಗೆ ರಾಜ್ಯಸಭೆಯು ಅಸ್ತು ಎಂದ ಬಳಿಕ ಲೋಕಸಭೆಯು ತಾಂತ್ರಿಕ ತಿದ್ದುಪಡಿಗಳೊಂದಿಗೆ ಗುರುವಾರ ಅವುಗಳನ್ನು ಅಂಗೀಕರಿಸಿತು.
ವಿಪತ್ತು ನಿರ್ವಹಣೆ(ತಿದ್ದುಪಡಿ) ಮಸೂದೆ, 2024 ಮತ್ತು ರೈಲ್ವೆ(ತಿದ್ದುಪಡಿ) ಮಸೂದೆ, 2024 ಅನ್ನು ಲೋಕಸಭೆಯು ಕಳೆದ ವರ್ಷ ಅಂಗೀಕರಿಸಿದ ಬಳಿಕ ಅವುಗಳನ್ನು ಅನುಮೋದನೆಗಾಗಿ ರಾಜ್ಯಸಭೆಗೆ ಕಳುಹಿಸಲಾಗಿತ್ತು.
ಎರಡು ಮಸೂದೆಗಳ ಜಾರಿ ಸೂತ್ರಗಳಲ್ಲಿ 75ನೇ ವರ್ಷವನ್ನು 76ನೇ ವರ್ಷ ಎಂದು ಬದಲಿಸಲಾಗಿದೆ.
ಲೋಕಸಭೆಯು ಅನುಮೋದಿಸಿದ ತಿದ್ದುಪಡಿಗಳು ಸ್ವಾತಂತ್ರ್ಯಾನಂತರದ ವರ್ಷಕ್ಕೆ ಸಂಬಂಧಿಸಿವೆ. ಎರಡು ಶಾಸನಗಳು ಲೋಕಸಭೆಯಿಂದ ಅಂಗೀಕಾರಗೊಂಡ ಒಂದು ವರ್ಷ ಕಳೆದ ಬಳಿಕ ಜಾರಿಗೆ ಬರಲಿವೆ.
ಮಸೂದೆಗಳು ಶಾಸನಗಳಾದ ಬಳಿಕ ಅವುಗಳ ಹೆಸರಿನೊಂದಿಗೆ ಸೇರಿಕೊಂಡಿರುವ ವರ್ಷವು 2024ರಿಂದ 2025ಕ್ಕೆ ಬದಲಾಗಲಿದೆ.