ಉತ್ತರ ಪ್ರದೇಶ: ಹಫ್ತಾ ವಸೂಲಿ ಆರೋಪದಲ್ಲಿ ಪೋಲಿಸರನ್ನೇ ಥಳಿಸಿ ಒತ್ತೆಯಾಳುಗಳಾಗಿ ಇಟ್ಟುಕೊಂಡ ಗ್ರಾಮಸ್ಥರು
ಮೀರತ್: ಇಲ್ಲಿಯ ಇಬ್ಬರು ಪೋಲಿಸರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಗ್ರಾಮಸ್ಥರು,ಅವರು ಹಫ್ತಾ ವಸೂಲಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ ಮತ್ತು ಅವರನ್ನು ಥಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಪರೀಕ್ಷಿತಗಡ ಪೋಲಿಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಸತ್ಯೇಂದ್ರ ಮತ್ತು ತರಬೇತಿ ಎಸ್‌ಐ ಶಿವಂ ಅವರನ್ನು ಶನಿವಾರ ರಾತ್ರಿ ಗೋವಿಂದಪುರಿ ಗ್ರಾಮಸ್ಥರು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ ಮತ್ತು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಾಹಿತಿ ತಿಳಿದ ಬಳಿಕ ಹಲವಾರು ಠಾಣೆಗಳಿಂದ ಪೋಲಿಸ್ ಪಡೆಗಳು ಸ್ಥಳಕ್ಕೆ ಧಾವಿಸಿದ್ದವು ಎಂದರು.
ಸತ್ಯೇಂದ್ರ ಹಲವು ದಿನಗಳಿಂದ ಅಂಗಡಿಕಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರತಿದಿನ ಒಬ್ಬರಲ್ಲ ಒಬ್ಬರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಮತ್ತು ವಿರೋಧಿಸಿದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಲವಾರು ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಇಬ್ಬರೂ ಸಬ್-ಇನ್ಸ್‌ಪೆಕರ್‌ಗಳನ್ನು ಅಮಾನತು ಮಾಡುವಂತೆ ಮತ್ತು ವರದಿ ಸಲ್ಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಸ್ಥರನ್ನು ಸಮಾಧಾನಪಡಿಸಿದ ಸರ್ಕಲ್ ಇನ್ಸ್‌ಪೆಕ್ಟರ್(ಗ್ರಾಮೀಣ) ನವಿನಾ ಶುಕ್ಲಾ ಅವರು,ಆರೋಪಿ ಪೋಲಿಸರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಬಗ್ಗೆ ತನಿಖೆಗೆ ಸೂಚಿಸಲಾಗಿದೆ ಎಂದು ಹಿರಿಯ ಎಸ್‌ಪಿ ಡಾ.ವಿಪಿನ್ ತಾಡಾ ತಿಳಿಸಿದರು.