ಪಾದಯಾತ್ರೆಯ ವೇಳೆ ಕೇಜ್ರಿವಾಲ್ ಮೇಲೆ ನೀರೆರಚಿದ ವ್ಯಕ್ತಿ!

Update: 2024-11-30 16:23 GMT

ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ | PC : X \ @yuva_journalist 

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಪಾದಯಾತ್ರೆ ಮಾಡುತ್ತಿದ್ದ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ವ್ಯಕ್ತಿಯೊಬ್ಬ ನೀರು ಎರಚಿದ್ದಾನೆ.

ಬಳಿಕ, ಭದ್ರತಾ ಸಿಬ್ಬಂದಿ ಮತ್ತು ಕೇಜ್ರಿವಾಲ್‌ರ ಬೆಂಬಲಿಗರು ವ್ಯಕ್ತಿಯನ್ನು ಹಿಡಿದು ಥಳಿಸಿರುವುದನ್ನು ವೀಡಿಯೊ ಕ್ಲಿಪ್‌ಗಳು ತೋರಿಸಿವೆ.

ಕೇಜ್ರಿವಾಲ್ ದಕ್ಷಿಣ ದಿಲ್ಲಿಯ ಮಾಳವೀಯ ನಗರದ ಪ್ರದೇಶವೊಂದರಲ್ಲಿ ತನ್ನ ಬೆಂಬಲಿಗರೊಂದಿಗೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀರು ಎರಚಿದ ವ್ಯಕ್ತಿಯನ್ನು ಅಶೋಕ್ ಝಾ ಎಂಬುದಾಗಿ ಗುರುತಿಸಲಾಗಿದ್ದು, ಆತನನ್ನು ಪ್ರಶ್ನಿಸಲಾಗುತ್ತಿದೆ.

‘‘ದಿಲ್ಲಿಯಲ್ಲಿ ಕಾನೂನು ಮತ್ತು ವ್ಯವಸ್ಥೆ ಕುಸಿದಿದೆ. ಕೇಂದ್ರ ಸರಕಾರ ಮತ್ತು ಗೃಹ ಸಚಿವರು ಏನೂ ಮಾಡುತ್ತಿಲ್ಲ’’ ಎಂದು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ನಾಯಕ ಸೌರವ್ ಭಾರದ್ವಾಜ್ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News