ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಗಿದೆ: ನಿವೃತ್ತ ನ್ಯಾಯಮೂರ್ತಿ ಮುರಳೀಧರ್

Update: 2025-03-22 21:00 IST
S. Muralidhar

ನ್ಯಾಯಮೂರ್ತಿ ಎಸ್. ಮುರಳೀಧರ್ | PC: X 

  • whatsapp icon

ಹೊಸದಿಲ್ಲಿ: ಹಲವು ಮುಖ್ಯ ವಾಹಿನಿಯ ಮಾಧ್ಯಮಗಳು ಅತಿ ದೊಡ್ಡ ಕಾರ್ಪೋರೇಟ್ ಸಂಸ್ಥೆ ಅಥವಾ ರಾಜಕೀಯ ಪಕ್ಷಗಳ ಒಡೆತನದಲ್ಲಿರುವುದರಿಂದ ಭಾರತದಲ್ಲಿ ಮಾಧ್ಯಮಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಗಿದೆ ಎಂದು ಒಡಿಶಾ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್. ಮುರಳೀಧರ್ ಶುಕ್ರವಾರ ಹೇಳಿದ್ದಾರೆ.

ನ್ಯಾಯಮೂರ್ತಿ (ನಿವೃತ್ತ) ಮುರಳೀಧರ್ ಅವರು ಇಲ್ಲಿ ನಡೆದ ‘ಮಾಧ್ಯಮ, ನ್ಯಾಯಾಲಯಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ’ ವಿಷಯದ ಕುರಿತ ಬಿ.ಜಿ. ಸ್ಮರಣಾರ್ಥ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದರು.

ಸ್ವತಂತ್ರ್ಯ ಪತ್ರಿಕೋದ್ಯಮದ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳು ಹಾಗೂ ಮಾಧ್ಯಮದ ಮೇಲೆ ಕಾರ್ಪೊರೇಟ್ ಹಾಗೂ ರಾಜಕೀಯ ಪ್ರಭಾವದಿಂದ ಎದುರಾದ ಸವಾಲಿನ ಕುರಿತು ಗಮನ ಸೆಳೆದ ಅವರು, ಪ್ರಮುಖ ಮುದ್ರಣ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮ ಸಂಸ್ಥೆಗಳು ಕಾರ್ಪೊರೇಟ್ ಸಂಸ್ಥೆಗಳು ಅಥವಾ ರಾಜಕೀಯ ಪಕ್ಷಗಳಿಂದ ಹೆಚ್ಚಾಗಿ ನಿಯಂತ್ರಿಸಲ್ಪಡುತ್ತಿವೆ ಎಂದಿದ್ದಾರೆ.

‘‘ಭಾರತದಲ್ಲಿ ಮಾಧ್ಯಮ ತನ್ನ ಸ್ವತಂತ್ರ್ಯಕ್ಕಾಗಿ ಹೋರಾಡಬೇಕಾಗಿದೆ. ಮುಖ್ಯವಾಹಿನಿಯ ಹೆಚ್ಚಿನ ಮುದ್ರಣ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳ ಒಡೆತನವನ್ನು ಕಾರ್ಪೊರೇಟ್ ಸಂಸ್ಥೆ ಅಥವಾ ರಾಜಕೀಯ ಪಕ್ಷಗಳು ಹೊಂದಿರುವುದು ಸತ್ಯ. ಎರಡೂ ಮಾಧ್ಯಮಗಳು ಸರಕಾರಿ ಜಾಹೀರಾತುಗಳು, ಪರವಾನಿಗೆ, ಕಾರ್ಪೊರೇಟ್ ಪ್ರಾಯೋಜಕತ್ವ, ಜಾಹೀರಾತುಗಳ ಮೇಲೆ ಅವಲಂಬಿತವಾಗಿದ್ದು, ಸಂಪೂರ್ಣವಾಗಿ ವಾಣಿಜ್ಯ ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸುತ್ತದೆ’’ ಎಂದು ಅವರು ಹೇಳಿದ್ದಾರೆ.

ಮಾಹಿತಿ ಹಾಗೂ ಪ್ರಸಾರ ಸಚಿವ ಭಾರತದ ಪತ್ರಿಕೋದ್ಯಮ ಬಲಿಷ್ಠ ಹಾಗೂ ಸಮೃದ್ಧ ಎಂದು ಇತ್ತೀಚೆಗೆ ಬಣ್ಣಿಸಿದ್ದಾರೆ. ಆದರೆ, ಮಾಜಿ ಮುಖ್ಯ ನ್ಯಾಯಮೂರ್ತಿ ಈ ಗುಣಲಕ್ಷಣಗಳು ಮುಕ್ತ ಹಾಗೂ ಸ್ವತಂತ್ರ್ಯವಾಗಿರುವುದಕ್ಕೆ ಸಮಾನವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಇಂದು ಮುಖ್ಯ ವಾಹಿನಿಯ ಮಾದ್ಯಮಗಳು ಸರಕಾರಿ ಜಾಹೀರಾತು, ಕಾರ್ಪೊರೇಟ್ ಪ್ರಾಯೋಜಕತ್ವ ಹಾಗೂ ರಾಜಕೀಯ ಆಶ್ರಯವನ್ನು ಅವಲಂಬಿಸಿ ಸಂಪೂರ್ಣವಾಗಿ ವಾಣಿಜ್ಯ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಅವಲಂಬನೆ ಅತಿರೇಕದ ಸ್ವ ಸೆನ್ಸಾರ್ ಶಿಪ್, ಪಾವತಿ ಸುದ್ದಿ ಹಾಗೂ ಲಾಭಕ್ಕೆ ಆದ್ಯತೆ ನೀಡುವುದಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News