ಹೆಂಡತಿಯನ್ನು ಹೊಂದಿರುವವರು ಮುಂದಿನ ಬಾರಿ ದೇಶದ ಪ್ರಧಾನಿಯಾಗಬೇಕು: ಲಾಲೂ ಪ್ರಸಾದ್‌ ಯಾದವ್‌

Update: 2023-07-06 12:17 GMT

ಲಾಲೂ ಪ್ರಸಾದ್‌ ಯಾದವ್‌ (PTI)

ಹೊಸದಿಲ್ಲಿ: ಹೆಂಡತಿಯನ್ನು ಹೊಂದಿಲ್ಲದವರು ಮುಂದಿನ ಪ್ರಧಾನಮಂತ್ರಿ ಆಗಬಾರದು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಮುಂಬರುವ 2024 ರ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದ ವಿರುದ್ಧ ಪ್ರತಿಪಕ್ಷಗಳು ಒಂದಾಗುತ್ತಿರುವ ನಡುವೆ, ಇತ್ತೀಚೆಗೆ ಲಾಲೂ ಯಾದವ್‌ ಅವರು ರಾಹುಲ್‌ ಗಾಂಧಿ ಅವರಿಗೆ ಮದುವೆಯಾಗುವಂತೆ ಸಲಹೆ ನೀಡಿದ್ದರು.

“ಯಾರು ಪ್ರಧಾನಿಯಾಗುತ್ತಾರೋ ಅವರು ಪತ್ನಿ ಇಲ್ಲದೆ ಇರಬಾರದು. ಪತ್ನಿ ಇಲ್ಲದೆ ಪ್ರಧಾನಿ ನಿವಾಸದಲ್ಲಿ ಇರುವುದು ತಪ್ಪು. ಇದನ್ನು ಹೋಗಲಾಡಿಸಬೇಕು..." ಎಂದು ಲಾಲೂ ಪ್ರಸಾದ್‌ ಯಾದವ್‌ ಅವರು ಹೇಳಿರುವುದಾಗಿ ANI ವರದಿ ಮಾಡಿದೆ.

ಯಾವುದೇ ಭ್ರಷ್ಟರನ್ನು ಬಿಡುವುದಿಲ್ಲ ಎಂಬ ಪ್ರಧಾನಿ ಮೋದಿಯವರ ಹೇಳಿಕೆಗೆ ಮಹಾರಾಷ್ಟ್ರ ರಾಜಕೀಯದ ಉದಾಹರಣೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಲಾಲು ಪ್ರಸಾದ್, “ನರೇಂದ್ರ ಮೋದಿ ಅವರೇ ಭ್ರಷ್ಟ ರಾಜಕಾರಣಿಗಳ ಸಂಚಾಲಕ” ಎಂದು ಹೇಳಿದ್ದಾರೆ.

ಜುಲೈ 17-18 ರಂದು ವಿರೋಧ ಪಕ್ಷಗಳ ಸಭೆಗಾಗಿ ಬೆಂಗಳೂರಿಗೆ ಆಗಮಿಸುವುದಾಗಿ ಲಾಲೂ ಪ್ರಸಾದ್‌ ಯಾದವ್‌ ಅವರು ಹೇಳಿದ್ದಾರೆ.

ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಮಾತನಾಡಿದ ಅವರು, "ನಾವು ಪಾಟ್ನಾದಲ್ಲಿ ಸಭೆ ನಡೆಸಿದ್ದೇವೆ, ಈಗ ನಾವು ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಸುತ್ತೇವೆ. 17 ಪಕ್ಷಗಳ ಜನರು ಒಂದಾಗುತ್ತಿದ್ದಾರೆ. ಅವರು (ಬಿಜೆಪಿ) ಅವರು ಏನು ಬೇಕಾದರೂ ಹೇಳಲಿ, ಅವರು ನಾಶವಾಗುತ್ತಾರೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News