ಸೆಕೆಂಡ್‌ಚಾನ್ಸ್

Update: 2016-02-13 18:07 GMT

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್‌ಗೆ ಉಪಚುನಾವಣೆಯ ರೂಪದಲ್ಲಿ ಸತ್ವಪರೀಕ್ಷೆಯೊಂದು ಕಾದಿದೆ. ದೇಗುಲ ನಗರವಾದ ಮೈಹಾರ್ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಈ ಉಪಚುನಾವಣೆಗೆ, ಆರಂಭದಲ್ಲಿ ಚೌಹಾಣ್ ಪ್ರಚಾರ ಕಣಕ್ಕಿಳಿಯದಿರಲು ನಿರ್ಧರಿಸಿದ್ದರು. ಚುನಾವಣೆಯಲ್ಲಿ ಪ್ರತಿಕೂಲ ಫಲಿತಾಂಶ ಬಂದಲ್ಲಿ, ವ್ಯಾಪಂ ಹಗರಣವು ತನ್ನ ವರ್ಚಸ್ಸಿಗೆ ಗಣನೀಯ ಹಾನಿಯುಂಟು ಮಾಡಿದೆಯೆಂಬ ಭಾವನೆ ಇನ್ನಷ್ಟು ಬಲಗೊಳ್ಳಲಿದೆಯೆಂದು ಅವರು ಬೆದರಿದ್ದರು. ಆದಾಗ್ಯೂ, ಕಾಂಗ್ರೆಸ್ ಪಕ್ಷವು ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ಕಮಲ್‌ನಾಥ್‌ರಂತಹ ಘಟಾನುಘಟಿ ನಾಯಕರನ್ನು ಪ್ರಚಾರಕಣಕ್ಕಿಳಿಸುವ ಮೂಲಕ ಚೌಹಾಣ್‌ಗೆ ಎದಿರೇಟು ನೀಡಲು ನಿರ್ಧರಿಸಿದ್ದರು.ಇದರಿಂದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಚಹಾಣ್‌ರನ್ನು ಪ್ರಚಾರಕಣಕ್ಕೆ ಎಳೆದು ತಾರದೆ ಬೇರೆ ದಾರಿಯಿರಲಿಲ್ಲ. ಇದಕ್ಕೂ ಮುನ್ನ ನಡೆದ ಉಪಚುನಾವಣೆಯೊಂದರಲ್ಲಿ ಚೌಹಾಣ್ ಪ್ರಚಾರಕ್ಕಿಳಿದಿದ್ದರು. ಅವರ ಬಿರುಸಿನ ಪ್ರಚಾರದ ಹೊರತಾಗಿಯೂ, ಕಾಂಗ್ರೆಸ್ ಪಕ್ಷವು ಬಿಜೆಪಿಯಿಂದ ಸೀಟನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಮೈಹಾರ್‌ನ ಉಪಚುನಾವಣಾ ಫಲಿತಾಂಶವು ಈ ಬಾರಿ ಭಿನ್ನವಾಗಿರುವುದೆಂಬ ಆಶಾವಾದವನ್ನು ಚೌಹಾಣ್ ಹಾಗೂ ಅವರ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News