ಪಾಠ ಕಲಿತ ಇರಾನಿ

Update: 2016-02-13 18:10 GMT

 ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ರಾಷ್ಟ್ರವಿರೋಧಿಗಳೆಂದು ಬಣ್ಣಿಸಿ, ಸಚಿವ ಬಂಡಾರು ದತ್ತಾತ್ರೇಯ ಬರೆದ ಪತ್ರವನ್ನು ಉಪಕುಲಪತಿಗೆ ಕಳುಹಿಸುವ ಮೂಲಕ ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆ ತೀವ್ರ ಟೀಕೆಗೊಳಗಾಗಿದ್ದರು. ಈ ಘಟನೆಯು ಆನಂತರ, ವಿವಿ ವಿದ್ಯಾರ್ಥಿ ರೋಹಿತ್ ವೇಮುಲಾರ ಸಾವಿಗೆ ಕಾರಣವಾಯಿತು.ಈಗ ಇರಾನಿ ತುಂಬಾ ಜಾಗರೂಕತೆ ವಹಿಸುತ್ತಿದ್ದಾರೆ.ಯಾವುದೇ ಎಂಪಿ ಅಥವಾ ಎಂಎಲ್‌ಎ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗೆ ಬರೆದ ಪತ್ರವನ್ನು ಫಾರ್ವರ್ಡ್ ಮಾಡುವಾಗ ಪತ್ರದಲ್ಲಿನ ವಿಷಯವನ್ನು ಉಲ್ಲೇಖಿಸಕೂಡದೆಂಬ ಆಂತರಿಕ ಸುತ್ತೋಲೆಯೊಂದನ್ನು ಸಚಿವಾಲಯ ಇತ್ತೀಚೆಗೆ ಜಾರಿಗೊಳಿಸಿದೆ. ಈ ಹಿಂದೆ ಒಂದು ವೇಳೆ ಸಚಿವರು ಅಥವಾ ಸಂಸದರು ಬರೆದ ಪತ್ರವನ್ನು ಸಚಿವಾಲಯವು ವಿಶ್ವವಿದ್ಯಾನಿಲಯ ಅಥವಾ ಇತರ ಸಂಸ್ಥೆಗೆ ಫಾರ್ವರ್ಡ್ ಮಾಡುವಾಗ ಅದರಲ್ಲಿ ‘‘ವಿಐಪಿಯಿಂದ ’’ (from VIP)  ಎಂಬುದಾಗಿ ನಮೂದಿಸಲಾಗುತ್ತಿತ್ತು. ಇನ್ನು ಮುಂದೆ ಹಾಗೆ ಉಲ್ಲೇಖಿಸದೆ, ಸುಮ್ಮನೆ ಫಾರ್ವರ್ಡ್ ಮಾಡಲಾಗುತ್ತದೆ. ಇರಾನಿ ಈಗ ಪಾಠ ಕಲಿತಿರುವಂತೆ ಕಾಣುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News