ಬೌದ್ಧ ಧಮ್ಮದ ಅನುಯಾಯಿಯಾಗಿ ನಾನು ಹೇಳುತ್ತೇನೆ : ಆಂಗ್ ಸಾಂಗ್ ಸು ಕಿಗೆ ಧಿಕ್ಕಾರ!!

Update: 2016-12-13 18:20 GMT

ಮುಸ್ಲಿಮರು ಎಲ್ಲದಕ್ಕೂ ತಲೆ ಕೊಡಬೇಕು. ಪ್ರಪಂಚದ ಯಾವುದೊ ಮೂಲೆಯಲ್ಲಿ ಮುಸ್ಲಿಂ ಹೆಸರಿನ ಯುವಕರು ನಾಲ್ಕಾರು ಪಿಕ್ ಪಾಕೆಟ್ ಮಾಡಿದರೆ ಸಹ ಪ್ರಪಂಚದ ಎಲ್ಲ ಮುಸ್ಲಿಮರು ಅದನ್ನು ಖಂಡಿಸಬೇಕು ಎಂದು ಆಗ್ರಹಿಸಲಾಗುತ್ತದೆ. ಇದರಲ್ಲಿ ಬುದ್ಧಿಜೀವಿಗಳೂ ಹಿಂದೆ ಬೀಳುವುದಿಲ್ಲ.

ಆದರೆ ಬುದ್ಧ ಧಮ್ಮದವರು ಬಹುಸಂಖ್ಯಾತರಾಗಿರುವ ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ರೋಹಿಂಗ್ಯಾ ಧಾರ್ಮಿಕ ಅಲ್ಪಸಂಖ್ಯಾತರ ಮಾರಣ ಹೋಮವನ್ನು ಯಾವ ಬುದ್ಧ ಧಮ್ಮದವರು ಖಂಡಿಸಿದ ಉದಾಹರಣೆಗಳೇ ಸಿಗುವುದಿಲ್ಲ. ಸ್ವಲ್ಪ ಮಟ್ಟಿಗೆ ದಲಾಯಿ ಲಾಮಾ ಬಿಟ್ಟರೆ ಪ್ರಪಂಚದ ಪ್ರಮುಖ ಬೌದ್ಧ ಧಮ್ಮ ಗುರುಗಳು ಇದನ್ನು ಖಂಡಿಸಿಲ್ಲ. ಇದು ಇಂದಿನ ಅತ್ಯಂತ ದೊಡ್ಡ ಅಗತ್ಯ.

ಮ್ಯಾನ್ಮಾರನಲ್ಲಿನ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ಹತ್ಯೆಗಳ ಕುರಿತು ಆಂಗ್ ಸಾಂಗ್ ಸು ಕಿ ಯವರ ದಿವ್ಯ ಮೌನ ಎಲ್ಲ ದೇಶಗಳ ಶಾಂತಿಪ್ರಿಯ ಜನತೆ, ಅದರಲ್ಲೂ ಪ್ರಪಂಚದಾದ್ಯಂತ ನೆಲೆಸಿರುವ ಬೌದ್ಧರು ಖಂಡಿಸಲೇ ಬೇಕಾದ ಕೃತ್ಯ.

ಓರ್ವ ಬೌದ್ಧ ಧಮ್ಮದ ಅನುಯಾಯಿಯಾಗಿ ನಾನು ಹೇಳುತ್ತೇನೆ:

ಆಂಗ್ ಸಾಂಗ್ ಸು ಕಿಗೆ ದಿಕ್ಕಾರ!!

Writer - ಶ್ರೀಧರ್ ಪ್ರಭು

contributor

Editor - ಶ್ರೀಧರ್ ಪ್ರಭು

contributor

Similar News