ಮನ್ನಾರ್ ಗುಡಿ ಸೇರಿರುವ ಮರ್ಯಾದಸ್ಥ ಮಾಧ್ಯಮಗಳು
ಉಣ್ಣುವ ಬಟ್ಟಲಿನಲ್ಲಿ ತೂತು ತೆಗೆಯುವ ಇಂತಹ ಘಟನೆಗಳು ದೇಶಕ್ಕೆ ಮಹತ್ವದ ಸುದ್ದಿ ಆಗಬೇಕಿತ್ತು. ಆದರೆ ತಳ ತಲುಪಿ ಸುದ್ದಿ ಮಾಡಬೇಕಾಗಿದ್ದ ಸ್ಥಳೀಯ ಮಾಧ್ಯಮಗಳೆಲ್ಲ ಕಳೆದ ಮೂರು ತಿಂಗಳಿನಿಂದ ಜಯಲಲಿತಾ ಯಾವಾಗ ತೀರಿಕೊಂಡರು ಮತ್ತು ಹೇಗೆ ತೀರಿಕೊಂಡರು ಎಂಬ ಬಗ್ಗೆ ಸ್ಕೂಪುಗಳ ಹಿಂದೆ, ಜಲ್ಲಿಕಟ್ಟು ಹೆಸರಿನಲ್ಲಿ ಇಡಿಯ ತಮಿಳುನಾಡು ಒಂದಾಗಿ ಸುಪ್ರೀಂ ಕೋರ್ಟು ಹಿಂದಾದದ್ದರ ಸುತ್ತ, ಮತ್ತು ಈಗ ಸೆಕ್ರೆಟರಿಯೇಟ್ ಕಟ್ಟಡಕ್ಕೂ ಗೋಲ್ಡನ್ ಬೇ ರೆಸಾರ್ಟಿಗೂ ನಡುವೆ ನಡೆಯುತ್ತಿರುವ ಡ್ಞಿ ವಿನಿಮಯ ಕಾರ್ಯಕ್ರಮಗಳಿಗೆ ಸಾಕ್ಷಿ ಆಗುವಲ್ಲಿ ವ್ಯಸ್ತವಾಗಿವೆ.
ಚೆನ್ನೈ ಹೊರವಲಯದ ಎಗ್ಮೋರ್ ಎಂಬಲ್ಲಿ ಎರಡು ವಾಣಿಜ್ಯ ಹಡಗುಗಳು ಢಿಕ್ಕಿ ಹೊಡೆದುಕೊಂಡು, ಸಾವಿರಾರು ಟನ್ ಕಚ್ಚಾತೈಲ ನೀರಿಗೆ ಚೆಲ್ಲಿತು. ಅಧಿಕಾರಿಗಳು ಏನಿಲ್ಲ, ಏನೂ ಚೆಲ್ಲಿಲ್ಲ, ಎಲ್ಲ ಸರಿಯಾಗಿದೆ ಎಂದು ಹೇಳಿ ಬಾಯಿ ಮುಚ್ಚುವ ಮೊದಲೇ ಚೆನ್ನೈ ಆಸುಪಾಸಿನ 35 ಕಿ.ಮೀ. ಉದ್ದದ ಸಮುದ್ರ ತೀರದ ವ್ಯಾಪ್ತಿಯಲ್ಲಿ ತೈಲದ ಜಿಡ್ಡು ಬಂದಪ್ಪಳಿಸಿತು.
ಈಗ ಈ ತೈಲದ ಜಿಡ್ಡನ್ನು ತೆಗೆಯುವ, ತೆಗೆದಂತೆ ಮಾಡುವ ನಾಟಕದ ಸುದ್ದಿಗಳ ಜೊತೆಗೇ ತೆಗೆದ ಜಿಡ್ಡನ್ನು ಮತ್ತೆ ಸಮುದ್ರ ತೀರದಲ್ಲೇ ಮರಳಿನಲ್ಲಿ ಹೂಳುತ್ತಿದ್ದಾರೆ ಎಂಬ ದುರ್ವಾರ್ತೆ ಕೇಳಿಬರುತ್ತಿದೆ.
ಇದೆಲ್ಲ ಆರಂಭವಾದದ್ದು ಜನವರಿ 28ರ ಸಂಜೆ 3.30ರ ಹೊತ್ತಿಗೆ. ಕತಾರ್ ದೇಶದಿಂದ ಎಲ್‌ಪಿಜಿ ಹೊತ್ತು ತಂದಿದ್ದ ಆ ಟ್ಝಛಿ ಹಡಗು ಚೆನ್ನೈನ ಕಾಮರಾಜರ್ ಬಂದರಿನಿಂದ ವಿಶಾಖಪಟ್ಟಣಂ ಕಡೆಗೆ ಹೊರಟಿತ್ತು. ಅದೇ ವೇಳೆಗೆ 32,813 ಮೆಟ್ರಿಕ್ ಟನ್ ಕಚ್ಚಾ ತೈಲ ಹೇರಿಕೊಂಡಿದ್ದ ಟ್ಯಾಂಕರ್ ಹಡಗು ಈಡ್ಞಿ ಓಚ್ಞ್ಚಜಿಟ್ಠ್ಟಞ ಚೆನ್ನೈ ಬಂದರಿನ ಕಡೆ ಬರುತ್ತಿತ್ತು.
ಇವೆರಡೂ ಹಡಗುಗಳು ಬಂದರಿನ ಪ್ರವೇಶ ಕಾಲುವೆಯಲ್ಲಿ ಢಿಕ್ಕಿ ಹೊಡೆದುಕೊಂಡು, ದುರಂತ ಸಂಭವಿಸಿತು. ಚೆನ್ನೈ ಬಂದರು ಮಂಡಳಿ ‘‘ಅಪಘಾತ ಸಂಭವಿಸಿದ್ದು ಹೌದು, ತೈಲ ಸಮುದ್ರಕ್ಕೆ ಚೆಲ್ಲಿಹೋಗಿಲ್ಲ ಪರಿಸರಕ್ಕೆ ಹಾನಿ ಆಗಿಲ್ಲ’’ ಎಂದು ಸಮಜಾಯಿಷಿ ನೀಡಿತ್ತು.
ಚೆಲ್ಲಿದ ಸಾವಿರಾರು ಲೀಟರ್ ತೈಲದ ಜಿಡ್ಡು 35 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡು, ಸಮುದ್ರ ತೀರ ಜಿಡ್ಡುಮಯವಾದಾಗ ಎಚ್ಚೆತ್ತ ಅಧಿಕಾರಿಗಳು, ಅದನ್ನು ಶುಚಿಗೊಳಿಸತೊಡಗಿದರು. ಸಮುದ್ರ ಜೀವ ಜಗತ್ತಿಗೆ ಚೆಲ್ಲಿದ ತೈಲ ಒಂದುಬಗೆಯ ವಿಷವಾದರೆ, ಅದನ್ನು ಶುಚಿಮಾಡಲು ಬಳಸುವ ರಾಸಾಯನಿಕಗಳು (ಖಈ) ಮತ್ತೊಂದು ಬಗೆಯ ವಿಷ. ಚೆನ್ನೈ ಕಡಲ ಆಳದಲ್ಲಿರುವ ಡಾಲ್ಫಿನ್‌ಗಳು, ತಿಮಿಂಗಿಲಗಳು, ಅಪರೂಪದ ಕಡಲಾಮೆಗಳು, ಮೀನು ಮತ್ತಿತರ ಸಾಗರ ಜೀವ ಜಗತ್ತು ಈಗ ಅಪಾಯಕ್ಕೆ ಸಿಲುಕಿವೆ. ಜೊತೆಗೆ ಈ ರಾಸಾಯನಿಕಗಳು ಹೊರಸೂಸುವ ವಿಷ ದೀರ್ಘಕಾಲಿಕ ಪರಿಣಾಮ ಇರುವಂತಹವು.
ಬಂದರು ಅಧಿಕಾರಿಗಳು ಮೊದಲು ಕೇವಲ 200 ಲೀಟರ್ ತೈಲ ಸಮುದ್ರಕ್ಕೆ ಚೆಲ್ಲಿದೆ ಎಂದು ಹೇಳಿಕೆ ನೀಡಿದ ಬಳಿಕ, 11ದಿನಗಳಲ್ಲಿ 200ಟನ್‌ನಷ್ಟು ತೈಲ ಜಿಡ್ಡನ್ನು ಹೊರತೆಗೆಯಲಾಗಿದೆ. ಈಗ ಈ ತೆಗೆದ ಜಿಡ್ಡನ್ನು ಸಮುದ್ರ ತೀರದಲ್ಲೇ ಹೂಳಲಾಗುತ್ತಿದೆ ಎಂಬ ಕೂಗು ಸ್ಥಳೀಯ ಮೀನುಗಾರ ಸಮುದಾಯದಿಂದ ಕೇಳಿಬರುತ್ತಿದೆ.
ಈಗಾಗಲೇ ಮೀನು ಮಾರುಕಟ್ಟೆಗೆ ಶೇ. 50 ಹೊಡೆತ ಬಿದ್ದಿದ್ದು, ಜೊತೆಗೆ ಮೀನುಗಾರರ, ಸಮುದ್ರ ತೀರದ ವಾಸಿಗಳ ಆರೋಗ್ಯ ಕೂಡ ಅಪಾಯದಲ್ಲಿದೆ. ಈ ಇಡಿಯ ಪ್ರಕರಣ, ಆಪತ್ತಿನ ಸ್ಥಿತಿಗಳ ನಿಭಾವಣೆಯಲ್ಲಿ ದೇಶ ಎಷ್ಟು ಬಡಕಲಾಗಿಯೇ ಉಳಿದಿದೆ ಎಂಬುದನ್ನು ಬೊಟ್ಟುಮಾಡುತ್ತಿದೆ. ಇಂಡಿಯಾ ಡಿಜಿಟಲ್ ಆದದ್ದಾಗಲೀ, ನಮ್ಮ ದೇಶಪ್ರೇಮ-ದೇಶಭಕ್ತಿಗಳಾಗಲೀ ಇಲ್ಲಿ ಬಳಕೆಗೆ ಬರುತ್ತಿಲ್ಲ.
ಉಣ್ಣುವ ಬಟ್ಟಲಿನಲ್ಲಿ ತೂತು ತೆಗೆಯುವ ಇಂತಹ ಘಟನೆಗಳು ದೇಶಕ್ಕೆ ಮಹತ್ವದ ಸುದ್ದಿ ಆಗಬೇಕಿತ್ತು. ಆದರೆ ತಳ ತಲುಪಿ ಸುದ್ದಿ ಮಾಡಬೇಕಾಗಿದ್ದ ಸ್ಥಳೀಯ ಮಾಧ್ಯಮಗಳೆಲ್ಲ ಕಳೆದ ಮೂರು ತಿಂಗಳಿನಿಂದ ಜಯಲಲಿತಾ ಯಾವಾಗ ತೀರಿಕೊಂಡರು ಮತ್ತು ಹೇಗೆ ತೀರಿಕೊಂಡರು ಎಂಬ ಬಗ್ಗೆ ಸ್ಕೂಪುಗಳ ಹಿಂದೆ, ಜಲ್ಲಿಕಟ್ಟು ಹೆಸರಿನಲ್ಲಿ ಇಡಿಯ ತಮಿಳುನಾಡು ಒಂದಾಗಿ ಸುಪ್ರೀಂ ಕೋರ್ಟು ಹಿಂದಾದದ್ದರ ಸುತ್ತ, ಮತ್ತು ಈಗ ಸೆಕ್ರೆಟರಿಯೇಟ್ ಕಟ್ಟಡಕ್ಕೂ ಗೋಲ್ಡನ್ ಬೇ ರೆಸಾರ್ಟಿಗೂ ನಡುವೆ ನಡೆಯುತ್ತಿರುವ ಡ್ಞಿ ವಿನಿಮಯ ಕಾರ್ಯಕ್ರಮಗಳಿಗೆ ಸಾಕ್ಷಿ ಆಗುವಲ್ಲಿ ವ್ಯಸ್ತವಾಗಿವೆ.
1987ರಲ್ಲಿ ಎಂಜಿಆರ್ ನಿಧನರಾದಾಗ ಉದಯಿಸಿದ ಜಯಲಲಿತಾ ಎಂಬ ಎನಿಗ್ಮಾ ಈಗ ಶಶಿಕಲಾ ನಟರಾಜನ್ ಎಂಬ ಹೆಸರಿನಲ್ಲಿ ಮರುಹುಟ್ಟು ಪಡೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಮಾಧ್ಯಮಗಳು ತಾವು ಪ್ರಜಾಪ್ರಭುತ್ವದ ನಾಲ್ಕನೇ ಕಂಬ ಎಂಬ ತಮ್ಮ ಸ್ವಯಂ ಘೋಷಿತ ಸ್ಥಾನವನ್ನು ಮರೆತೇ ಬಿಟ್ಟಿವೆ.
ಸಾಂವಿಧಾನಿಕವಾಗಿ ಏನುಮಾಡಿದರೆ ಪ್ರಜಾತಂತ್ರ ಆರೋಗ್ಯಕರವಾಗಿರು ತ್ತದೆ ಎಂಬುದನ್ನು ಹೇಳಬೇಕಾದ ಜವಾಬ್ದಾರಿ ಮರೆತಿರುವ ಮಾಧ್ಯಮಗಳು ಪಗಡೆಯಾಟಕ್ಕೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವ ಕೆಲಸದಲ್ಲಿ ನಿರತವಾಗಿವೆ.