ಅಸ್ಸಾಂ 'ಬಿಜೆಪಿ ಶಾಸಕನ' ಸೆಕ್ಸ್ ವೀಡಿಯೊ ವೈರಲ್

Update: 2017-02-19 15:33 GMT

ಗುವಾಹಟಿ, ಫೆ.19: ಅಸ್ಸಾಂನ ಬಿಜೆಪಿ ಶಾಸಕ ರಮಾಕಾಂತ ದೇವ್ರಿ ವಿರುದ್ದ ಲೈಂಗಿಕ ಹಗರಣದ ಆರೋಪ ಕೇಳಿಬಂದಿದ್ದು ಈ ಕುರಿತು ವಿಡಿಯೋ ದೃಶ್ಯಾವಳಿ ವೈರಲ್ ಆಗಿದೆ.

 ಅಸ್ಸಾಂನ ಮೊರಿಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಮಾಕಾಂತ ದೇವ್ರಿ, ಹೋಟೆಲ್ ಕೋಣೆಯೊಂದರಲ್ಲಿ ಯುವತಿಯೋರ್ವಳೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿ ಇರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆರೋಪನ್ನು ರಮಾಕಾಂತ್ ಅಲ್ಲಗಳೆದಿದ್ದಾರೆ.

ಶೀಘ್ರದಲ್ಲಿ ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು , ಸಚಿವ ಹುದ್ದೆಗೆ ನಾನೋರ್ವ ಪ್ರಭಲ ಅಭ್ಯರ್ಥಿಯಾಗಿದ್ದೇನೆ. ಈ ಹಿನ್ನೆಲೆಯಲ್ಲಿ ನನ್ನ ಪ್ರತಿಷ್ಠೆಗೆ ಮಸಿ ಬಳಿದು, ನನಗೆ ಸಚಿವ ಹುದ್ದೆಯ ಅವಕಾಶ ತಪ್ಪಿಸಲು ಕೆಲವರು ಹೂಡಿದ ತಂತ್ರ ಇದು. ಇಲ್ಲಿ ವೀಡಿಯೊ ದೃಶ್ಯಾವಳಿಗಳನ್ನು ತಿರುಚಲಾಗಿದೆ ಎಂದು ರಾಮಕಾಂತ್ ಸ್ಥಳೀಯ ಟಿವಿ ವಾಹಿನಿಗೆ ತಿಳಿಸಿದ್ದಾರೆ. ಈ ಬಗ್ಗೆ ವಿಧಿವಿಜ್ಞಾನ ಪರೀಕ್ಷೆ ನಡೆಸಿ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News