ಮನೋರೋಗಿಯೊಂದಿಗೆ ಬದುಕಿದ್ದೇನೆ, ಆ ನೋವು ನನಗೆ ಗೊತ್ತಿದೆ: ಸಂಸತ್ತಿನಲ್ಲಿ ಶಶಿ ತರೂರ್
ಹೊಸದಿಲ್ಲಿ, ಮಾ. 26: ಮನೋರೋಗಿಗಳೊಂದಿಗೆ ಬದುಕಿದ್ದೇನೆ. ಆದ್ದರಿಂದ ಆ ನೋವು ನನಗೆಗೊತ್ತಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಆತ್ಮಹತ್ಯೆ ಪ್ರಯತ್ನ ಅಪರಾಧವಲ್ಲದಂತೆ ಪಾರ್ಲಿಮೆಂಟ್‌ನಲ್ಲಿ ಮಂಡಿಸಲಾದ ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.
" ಮಾನಸಿಕ ಅಸ್ವಸ್ಥರಾದ ಅತ್ಯಂತ ಹತ್ತಿರದವರನ್ನು ನೋಡುವುದಕ್ಕಿಂತ ದೊಡ್ಡ ನೋವಿನ ವಿಚಾರ ಬೇರಿಲ್ಲ. ವೈಯಕ್ತಿಕ ಅನುಭವದಿಂದ ಹೇಳಲು ತನಗೆ ಸಾಧ್ಯವಿದೆ. ಮಾನಸಿಕ ರೋಗಿಯೊಂದಿಗೆ ನಾನು ಬದುಕಿದ್ದವನು. ಅವರು ಕೆಲವೊಮ್ಮೆ ನಕಾರಾತ್ಮಕವಾಗಿ ವರ್ತಿಸುತ್ತಾರೆ. ತಮಗೆ ಮಾನಸಿಕ ಅಸ್ವಾಸ್ಥ್ಯ ಇದೆಎನ್ನುವ ವಿಷಯವನ್ನೂ ಅವರು ಒಪ್ಪುವುದಿಲ್ಲ" ಎಂದು ತರೂರ್ ಹೇಳಿದರು.
ಮನೋರೋಗ ಸಂಕೀರ್ಣವಾದ ಊನತೆಯಾಗಿದೆ. ಕೆಲವರಿಗೆ ಚಂಚಲ ಮನಸ್ಸಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟವಿದೆ. ನೋಡುವಾಗ ಅವರು ಸಂಪೂರ್ಣ ಆರೋಗ್ಯವಂತರಂತೆಯೇ ನಮಗೆ ಕಾಣುತ್ತಾರೆ. ಸಂತೋಷದಿಂದಿರುವಂತೆ ಕಾಣುತ್ತಾರೆ. ವೇದನಾಜನಕ ಮಾನಸಿಕ ಸಂಘರ್ಷ ಅನುಭವಿಸುವಾಗಲು ನಮಗೆ ಅವರು ಸಾಮಾಜಿಕ ಜೀವಿಗಳಂತೆ ನಮಗೆ ಅನಿಸುತ್ತಾರೆ ಎಂದು ತರೂರ್ ಹೇಳಿದರು.
ಆತ್ಮಹತ್ಯೆ ಅಪರಾಧವಲ್ಲ ಎಂದುಮಾಡುವ ವ್ಯವಸ್ಥೆಯನ್ನು ಹೊಂದಿರುವ ಮಾನಸಿಕ ಆರೋಗ್ಯ ಮಸೂದೆಯನ್ನು ಆರೋಗ್ಯ ಸಚಿವ ಜೆ.ಪಿ. ನಡ್ಡಾ ನಿನ್ನೆ ಪಾರ್ಲಿಮೆಂಟ್‌ನಲ್ಲಿ ಮಂಡಿಸಿದರು. ಚಿಕಿತ್ಸೆಯಲ್ಲಿ ಭೇದಭಾವ ಆಗುತ್ತಿಲ್ಲ ಎನ್ನುವುದನ್ನು ದೃಢಪಡಿಸುವುದು ಮಸೂದೆಯಾಗಿದೆ ಎಂದು ಸಚಿವರು ಹೇಳಿದರು. ಸಾಮಾಜಿಕ ಮಾನಸಿಕ ಆರೋಗ್ಯ ಸುರಕ್ಷೆಗೆ ಆದ್ಯತೆ ನೀಡಲಾಗಿದೆ. ಆತ್ಮಹತ್ಯೆಗೆ ಪ್ರಯತ್ನಿಸುವವರಿಗೆ ಮಾನಸಿಕ ಆರೋಗ್ಯ ಇದೆ ಎಂದು ಪರಿಗಣಿಸಬೇಕೆಂದು ಮಸೂದೆಯಲಿ ನಿಷ್ಕರ್ಷಿಸಲಾಗಿದೆ. ಭಾರತದ ದಂಡ ಸಂಹಿತೆಯ ಪ್ರಕಾರ ಅಂತಹವರನ್ನು ಶಿಕ್ಷಿಸಬೇಕಾದದ್ದಲ್ಲ. ಮನೋರೋಗಿಗಳನ್ನು ಸಂಕಲೆಯಲ್ಲಿ ಕಟ್ಟಿಹಾಕಬಾರದು. ಬಲವಂತದ ಚಿಕಿತ್ಸಾ ರೀತಿಗಳನ್ನು ಉಪಯೋಗಿಸಬಾರದು. ಅವರ ಮಕ್ಕಳನ್ನು ಮೂರುವರ್ಷಕ್ಕೆ ಅವರಿಂದ ದೂರ ಇರಿಸಬೇಕು. ಮುಂತಾದ ವ್ಯವಸ್ಥೆಗಳನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಸಚಿವ ಜೆಪಿ ನಡ್ಡಾ ಹೇಳಿದರು. 2013ರಲ್ಲಿ ಅಂದಿನ ಆರೋಗ್ಯ ಸಚಿವ ಗುಲಾಂ ನಬಿ ಆಝಾದ್ ಪಾರ್ಲಿಮೆಂಟ್‌ನಲ್ಲಿ ಮಾನಸಿಕಾರೋಗ್ಯ ಮಸೂದೆಯನ್ನು ಮಂಡಿಸಿದ್ದರು. ಈ ಹಿಂದೆ ರಾಜ್ಯಸಭೆಯಲ್ಲಿ ಪಾಸಾದ ಮಸೂದೆಯನ್ನು ಈಗ ಲೋಕ ಸಭೆಯಲ್ಲಿ ಮಂಡಿಸಲಾಗಿದೆ.