ರೈತರ ಸಮಸ್ಯೆ: ತಮಿಳ್ನಾಡಿನಲ್ಲಿ ಎ. 25ಕ್ಕೆ ಬಂದ್?
Update: 2017-04-16 10:49 GMT
ಚೆನ್ನೈ, ಎ. 16: ತಮಿಳ್ನಾಡಿನ ರೈತರ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ಡಿಎಂಕೆ ಸಹಿತ ವಿರೋಧಪಕ್ಷಗಳು ಎಪ್ರಿಲ್ 25ಕ್ಕೆ ಬಂದ್‌ಗೆ ಕರೆ ನೀಡಿವೆ. ರೈತರ ಸಾಲಗಳನ್ನು ಮನ್ನಾ ಮಾಡಬೇಕು ಎಂದು ತಮಿಳ್ನಾಡಿನ ರೈತರು ಕೆಲವು ದಿವಸಗಳಿಂದ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದಿಲ್ಲಿಯಲ್ಲಲ್ಲದೆ, ತಮಿಳ್ನಾಡಿನ ತಂಜಾವೂರ್, ಕೋಯಮತ್ತೂರ್, ಕಾಂಚಿಪುರಂಗಳಲ್ಲಿ ಕೂಡಾ ಪ್ರತಿಭಟನೆ ನಡೆಯುತ್ತಿದೆ. ಕಾವೇರಿ ನದಿ ನೀರು ಹಂಚಿಕೆ ಕುರಿತು ಅಂತಿಮ ತೀರ್ಪು ಬರಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ತಮಿಳ್ನಾಡು ಈಗ ಭೀಕರ ಬರಪರಿಸ್ಥಿತಿಯನ್ನು ಎದುರಿಸುತ್ತಿದೆ. ಬರಪರಿಹಾರಕ್ಕೆ ಕೇಂದ್ರ ಸರಕಾರ ನೀಡಿರುವ ಮೊತ್ತ ಸಾಕಾಗುವುದಿಲ್ಲ ಎಂದು ತಮಿಳ್ನಾಡು ರೈತರು ವಾದಿಸುತ್ತಿದ್ದಾರೆ. ಮಾತ್ರವಲ್ಲ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಬೇಕೆಂದು ರೈತರು ಆಗ್ರಹಿಸುತಿದ್ದಾರೆ.