ಅಮೆರಿಕದ ಯೊಸೆಮೈಟ್ ಪಾರ್ಕ್‌ನ 800 ಅಡಿ ಆಳಕ್ಕೆ ಬಿದ್ದ ಭಾರತದ ದಂಪತಿ ಮೃತ್ಯು

Update: 2018-10-30 07:43 GMT

ನ್ಯೂಯಾರ್ಕ್, ಅ.30: ಭಾರತದ  ದಂಪತಿ ಅಮೆರಿಕದ ಖ್ಯಾತ ಯೊಸೆಮೈಟ್ ನ್ಯಾಶನಲ್ ಪಾರ್ಕ್‌ನ 800 ಅಡಿ ಎತ್ತರದ ಪ್ರದೇಶದಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ.

2006ರಲ್ಲಿ ಚೆಂಗನ್ನೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್‌ಸೈನ್ಸ್ ಇಂಜಿನಿಯರ್ ಪೂರೈಸಿರುವ ಈ ಇಬ್ಬರು ಅಮೆರಿಕದಲ್ಲಿ ನೆಲೆಸಿ, ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಪಾರ್ಕ್ ರೇಂಜರ್‌ಗಳು 29ರ ಹರೆಯದ ವಿಷ್ಣು ವಿಶ್ವನಾಥ್ ಹಾಗೂ 30ರ ಹರೆಯದ ಮೀನಾಕ್ಷಿ ಮೂರ್ತಿ ಅವರ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.

‘‘ಯೊಸೆಮೈಟ್ ನ್ಯಾಶನಲ್ ಪಾರ್ಕ್ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಲಿದ್ದು, ಈ ಘಟನೆಯು ಕೆಲವು ವಾರಗಳ ಹಿಂದೆಯೇ ನಡೆದಿದೆ’’ ಎಂದು ಪಾರ್ಕ್ ಅಧಿಕಾರಿಗಳು ತಿಳಿಸಿದ್ದಾರೆ.

ದಂಪತಿ ಟ್ರಾವೆಲಿಂಗ್‌ನ್ನು ತುಂಬಾ ಇಷ್ಟಪಡುತ್ತಿದ್ದರು. ‘ಹಾಲಿಡೇಸ್ ಹಾಗೂ ಹ್ಯಾಪಿಲಿ ಎವರ್ ಆಫ್ಟರ್ಸ್’ ಎಂಬ ವೆಬ್‌ಸೈಟ್‌ ಮಾಡಿ ತಮ್ಮ ಪ್ರವಾಸದ ಸಾಹಸವನ್ನು ಬಣ್ಣಿಸುತ್ತಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News