ವಿಮಾನದ ಕಾರ್ಗೊ ವಿಭಾಗದಲ್ಲಿ ನಿದ್ದೆ ಹೋದ ಸಿಬ್ಬಂದಿ: ಚಿಕಾಗೋಗೆ ಹಾರಿದ ವಿಮಾನ

Update: 2018-11-03 07:13 GMT

ಕಾನ್ಸಾಸ್, ನ. 3: ಅಮೆರಿಕನ್ ಏರ್ ಲೈನ್ಸ್ ನ ಲಗೇಜ್ ನಿರ್ವಹಣಾ ಸಿಬ್ಬಂದಿಯೊಬ್ಬರು ಕೆಲಸ ಮಾಡುತ್ತಾ ವಿಮಾನದಲ್ಲೇ ನಿದ್ದೆ ಹೋಗಿದ್ದು, ಅವರು ಆ ಬೋಯಿಂಗ್ 737 ವಿಮಾನದ ಕಾರ್ಗೊ ವಿಭಾಗದಲ್ಲಿದ್ದಾರೆಂದು ಯಾರಿಗೂ ತಿಳಿಯದ ಕಾರಣ ವಿಮಾನ ಚಿಕಾಗೋದತ್ತ ಪಯಣಿಸಿತ್ತು.

ಎರಡು ಗಂಟೆಗಳ ನಂತರ ವಿಮಾನ ಚಿಕಾಗೋದ ಓಹೇರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗಲೇ ಲಗೇಜ್ ಸಿಬ್ಬಂದಿ ಕಾರ್ಗೋ ವಿಭಾಗದಲ್ಲಿಯೇ ನಿದ್ದೆಗೆ ಜಾರಿದ್ದರೆಂದು ತಿಳಿದು ಬಂದಿತ್ತು.

ತಾನು ಮದ್ಯದ ನಶೆಯಲ್ಲಿದ್ದುದರಿಂದ ಈ ಪ್ರಮಾದ ನಡೆದಿದೆ ಎಂದು ಸಿಬ್ಬಂದಿ ಪೊಲೀಸ್ ಇಲಾಖೆ, ಎಫ್‍ಬಿಐ ಹಾಗೂ ಅಮೆರಿಕಾ ಅಟಾರ್ನಿ ಕಚೇರಿ ಅಧಿಕಾರಿಗಳು ನಡೆಸಿದ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆನ್ನಲಾಗಿದೆ.

ಈ 23 ವರ್ಷದ ಸಿಬ್ಬಂದಿಯ ವಿರುದ್ಧ ಯಾವುದೇ ಆರೋಪ ಹೊರಿಸಿಲ್ಲವಾದರೂ ಆತನನ್ನು ಕೆಲಸದಿಂದ ವಜಾಗೊಳಿಸಿ ತನಿಖೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News