ಅಮೆರಿಕದ ವಿಶ್ವಸಂಸ್ಥೆ ರಾಯಭಾರಿಯಾಗಿ ಹೆತರ್ ನ್ಯೂಯೆರ್ಟ್ ?

Update: 2018-11-03 17:58 GMT

ವಾಶಿಂಗ್ಟನ್,ನ.3:ವಿಶ್ವಸಂಸ್ಥೆಯಲ್ಲಿ ಅಮೆರಿಕದ ನೂತನ ರಾಯಭಾರಿಯಾಗಿ, ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಹೆತರ್ ನ್ಯೂಯೆರ್ಟ್ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ. ವಿಶ್ವಸಂಸ್ಥೆ ರಾಯಭಾರಿಯಾಗಿ ಹೆದರ್ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಗಣಿಸಿದ್ದಾರೆಂದು ಶ್ವೇತಭವನದ ಅಧಿಕಾರಿಯೊಬ್ಬರು ಎಬಿಸಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಒಂದು ವೇಳೆ ನ್ಯೂಯೆರ್ಟ್ ಅವರನ್ನು ಅಮೆರಿಕದ ವಿಶ್ವಸಂಸ್ಥೆ ರಾಯಭಾರಿ ಸ್ಥಾನಕ್ಕೆ ಟ್ರಂಪ್ ಶಿಫಾರಸು ಮಾಡಿದಲ್ಲಿ, ಅದಕ್ಕೆ ಸೆನೆಟ್‌ನ ಅಂಗೀಕಾರ ದೊರೆಯಬೇಕಾಗುತ್ತದೆ. ಎಬಿಸಿ ಸುದ್ದಿಸಂಸ್ಥೆಯ ಪತ್ರಕರ್ತೆಯಾಗಿದ್ದ ನ್ಯೂಯೆರ್ಟ್ 2017ರ ಎಪ್ರಿಲ್‌ನಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆಯಾಗಿ ನೇಮಕಗೊಂಡಿದ್ದರು. ಆಕೆ ಫಾಕ್ಶ್ ನ್ಯೂಸ್ ಸುದ್ದಿಸಂಸ್ಥೆಯಲ್ಲೂ ನಿರೂಪಕಿಯಾಗಿ ಸೇವೆ ಸಲ್ಲಿಸಿದ್ದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಭಿನ್ನಾಭಿಪ್ರಾಯ ವುಂಟಾದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ನಿಕಿ ಹೇಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News