ಇನ್ನೊಂದು ಅವಿಶ್ವಾಸ ನಿರ್ಣಯಕ್ಕೆ ಲಂಕಾ ಅಧ್ಯಕ್ಷ ಕರೆ

Update: 2018-11-16 16:45 GMT

ಕೊಲಂಬೊ, ನ. 16: ತಾನು ಕಳೆದ ತಿಂಗಳು ನೇಮಿಸಿರುವ ಪ್ರಧಾನಿ ಮಹಿಂದ ರಾಜಪಕ್ಸ ವಿರುದ್ಧ ಹೊಸದಾಗಿ ಅವಿಶ್ವಾಸ ನಿರ್ಣಯ ಮಂಡಿಸಿ ಎಂಬುದಾಗಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಗುರುವಾರ ಸಂಸತ್ತಿನ ಸ್ಪೀಕರ್ ಮತ್ತು ಕೆಲವು ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದ್ದಾರೆ.

ಶ್ರೀಲಂಕಾ ಸಂಸತ್ತು ಬುಧವಾರ ರಾಜಪಕ್ಸ ಮತ್ತು ಅವರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿರುವುದನ್ನು ಸ್ಮರಿಸಬಹುದಾಗಿದೆ. 225 ಸದಸ್ಯ ಬಲದ ಸಂಸತ್ತಿನಲ್ಲಿ ನಡೆದ ಧ್ವನಿಮತದ ಮತದಾನದಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ 122 ಮತಗಳು ಚಲಾವಣೆಯಾಗಿದ್ದವು.

ಪ್ರಧಾನಿಯಾಗಿ ರಾಜಪಕ್ಸರ ನೇಮಕಾತಿ ಅಸಾಂವಿಧಾನಿಕ ಎಂಬ ಸಂಸತ್ತಿನ ನಿಲುವನ್ನು ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಶುಕ್ರವಾರ ಹೊಸದಾಗಿ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಅವರು ಕರೆ ನೀಡಿದ್ದಾರೆ.

‘‘ಸಂಸದೀಯ ವಿಧಿವಿಧಾನವನ್ನು ಅನುಸರಿಸುವ ಮೂಲಕ ಸರಿಯಾದ ರೀತಿಯಲ್ಲಿ ಅವರ ಬಹುಮತವನ್ನು ತೋರಿಸುವಂತೆ ಅಧ್ಯಕ್ಷರು ಅವರಿಗೆ ಸೂಚನೆ ನೀಡಿದ್ದಾರೆ ಹಾಗೂ ಸಂವಿಧಾನದ ಪ್ರಕಾರ ನಡೆಯಲು ಒಪ್ಪಿಕೊಂಡಿದ್ದಾರೆ’’ ಎಂದು ಸಿರಿಸೇನರ ಮಾಧ್ಯಮ ತಂಡ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News